ರಾಜ್ಯ ವಿಧಾನ ಪರಿಷತ್ ನ 7 ಸ್ಥಾನಗಳಿಗೆ ಚುನಾವಣಾ ದಿನಾಂಕ ಫಿಕ್ಸ್. ಬೆಂಗಳೂರು,ಮೇ,10,2022(..):ಜೂನ್​ 14ರಂದು ರಾಜ್ಯದ 7 ವಿಧಾನ ಪರಿಷತ್​ ಸದಸ್ಯರ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಆ ಸ್ಥಾನಗಳಿಗೆ ಜೂನ್​ 3ರಂದು ಚುನವಾಣೆ ನಡೆಯಲಿದೆ. ಈ ಕುರಿತು ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ಜೂನ್ 3 ರಂದು ಮತದಾನ ನಡೆದು ಅಂದೇ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಎಂಎಲ್ ಸಿಗಳಾದ ಲಕ್ಷ್ಮಣ್​ ಸವದಿ, ರಾಮಪ್ಪ ತಿಮ್ಮಾಪುರ್​, ಅಲ್ಲಂ ವೀರಭದ್ರಪ್ಪ, ಎಚ್​.ಎಂ.ರಮೇಶ್​ ಗೌಡ, ವೀಣಾ ಅಚ್ಚಯ್ಯ ಎಸ್. ​ನಾರಾಯಣಸ್ವಾಮಿ ಕೆ.ವಿ. ಲೇಹರ್​ ಸಿಂಗ್​ ಅವರ ಅಧಿಕಾರಾವಧಿ ಜೂನ್​ 14ರಂದು ಕೊನೆಗೊಳ್ಳಲಿದೆ. ಮೇ 17 ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ಮೇ 24 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಲಿದೆ. ಮೇ25 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮೇ 27 ನಾಮಪತ್ರ ವಾಪಾಸ್ ಪಡೆಯಲು ಕಡೆಯದಿನವಾಗಿದೆ. ಜೂನ್ 3 ರಂದು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು ಸಂಜೆ 5 ಗಂಟೆಗೆ ಮತ ಏಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ. : - – 7 – …. 7 , 10, 2022 (..): 7 () 14. 3. . 3, . , , , .. , , . .. 14. 17, 24. 25, 27. 9.00 4.00 3. 5.00 , .: / 7 / 3/