ಪಿಡಿಓಗಳನ್ನ ಹದ್ಧುಬಸ್ತಿನಲ್ಲಿಡಿ: ಜನರಿಗೆ ವಿಶ್ವಾಸ ಮೂಡುವಂತೆ ಕೆಲಸ ಮಾಡಿ- ಸಿಇಒಗಳಿಗೆ ಸಿಎಂ ಬೊಮ್ಮಾಯಿ ಖಡಕ್ ವಾರ್ನಿಂಗ್. ಬೆಂಗಳೂರು,ಮೇ,9,2022(..):ಕೆಳಹಂತದ ಅಧಿಕಾರಿಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ಪಿಡಿಓಗಳನ್ನ ಹದ್ಧುಬಸ್ತಿನಲ್ಲಿಡಿ. ಜನರಲ್ಲಿ ವಿಶ್ವಾಸ ಮೂಡುವಂತೆ ಕೆಲಸ ಮಾಡಿ ಎಂದು ಜಿಲ್ಲಾಪಂಚಾಯತ್ ಸಿಇಒಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ವಾರ್ನಿಂಗ್ ನೀಡಿದರು. ಜಿಲ್ಲಾ ಪಂಚಾಯಿತ್​ ಸಿಇಒಗಳ ಜತೆ ಸಿಎಂ ಬಸವರಾಜ ಬೊಮ್ಮಾಯಿ ಸಮಲೋಚನೆ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಧಿಕಾರ ವಿಕೇಂದ್ರೀಕರಣ ಸರಿಯಾಗಿ ಆಗುವಂತೆ ನೋಡಿಕೊಳ್ಳಿ. ಮೊದಲು ನೀವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಸಿಇಒಗಳೇ ಗ್ರಾಮಗಳಿಗೆ ಹೋಗಲ್ಲ, ಪಿಡಿಒಗಳು ನಿಮಗೆ ಹೆದರಲ್ಲ. ಎಷ್ಟು ಜನ ಗ್ರಾ.ಪಂ.ಗಳಿಗೆ ಹೋಗಿ ಪರಿಶೀಲನೆ ಮಾಡಿದ್ದೀರಾ? ಎಷ್ಟು ಜನ ಫಲಾನುಭವಿಗಳ ಪಟ್ಟಿ ಆಯ್ಕೆ ಮಾಡಿದ್ದೀರಾ? ನಾಲ್ಕು ತಿಂಗಳ ಕೆಲಸವನ್ನು 12 ತಿಂಗಳು ಮಾಡುತ್ತೀರಿ. ಇವತ್ತಿನಿಂದ ಬದಲಾವಣೆ ಕಾರ್ಯ ಆರಂಭ ಆಗಬೇಕು. ಜನರಿಗೆ ವಿಶ್ವಾಸ ಬರುವಂತೆ ಕೆಲಸ ಮಾಡಿ ಎಂದು ಸೂಚನೆ ನೀಡಿದರು. ಅತ್ಯಂತ ಯೋಜನಾಬದ್ಧ ವೈಜ್ಞಾನಿಕ ದಾರಿಯಲ್ಲಿ ಸಾಗುತ್ತಿದ್ದೇವೆ. ಬೇರೆಯವರ ತರಹವೇ ನನ್ನ ಆಡಳಿತ ಅಂದುಕೊಳ್ಳಬೇಡಿ. ನನ್ನ ಸ್ಟೈಲೇ ಬೇರೆ, ಹೇಳೋರು ಕೇಳೋರೂ ಯಾರೂ ಇಲ್ಲ ಅಂದುಕೊಂಡಿದ್ದೀರಾ? ಐ ಆಯಮ್ ಸೀರಿಯಸ್. ಶಾಲೆಗಳಲ್ಲಿ ಮಕ್ಕಳಿಗೆ ವ್ಯಾಕ್ಸಿನ್ ಹಾಕಿ ಅಂದಿದ್ದೇವೆ. ಎಷ್ಟು ಜನ ಇದನ್ನು ಗಂಭೀರವಾಗಿ ಪರಿಗಣಿಸಿದ್ದೀರಾ? ಒಂದು ಜಿಲ್ಲೆಯಲ್ಲಿ 3 ಲಕ್ಷ ಮಕ್ಕಳಿದ್ದಾರೆ. ನಾಳೆ ಮಕ್ಕಳಿಗೆ ಏನಾದರೂ ಅದರೆ ಯಾರು ಜವಾಬ್ದಾರಿ? ಸೋಷಿಯಲ್ ಮತ್ತು ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವುದು ನಿಮ್ಮ ಜವಾಬ್ದಾರಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. : - -- … - . . “ . . ’ . ? ? 12 4 . . ,” .“ . ’ . . ? . . ? 3 . ? ,” .