ಅಜಾನ್ ವಿರುದ‍್ಧ ಅಭಿಯಾನ ನಡೆಸುತ್ತಿರುವವರು ಭಯೋತ್ಪಾದಕರು- ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಆರೋಪ. ಬೆಂಗಳೂರು,ಮೇ,9,2022(..):ಅಜಾನ್ ವಿರುದ್ಧ ಶ್ರೀರಾಮಸೇನೆ ಮತ್ತು ಹಿಂದೂ ಸಂಘಟನೆಗಳು ನಡೆಸುತ್ತಿರುವ ಸುಪ್ರಭಾತ ಅಭಿಯಾನದ ಬಗ್ಗೆ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಬಿ.ಕೆ ಹರಿಪ್ರಸಾದ್, ಸುಪ್ರಭಾತ ಅಭಿಯಾನ ನಡೆಸುತ್ತಿರುವವರು ಭಯೋತ್ಪಾದಕರು. ಆಜಾನ್ ವಿರುದ್ಧ ಅಭಿಯಾನ ಮಾಡುತ್ತಿರುವವರು ಉಗ್ರರು. ಅವರೆಲ್ಲರನ್ನೂ ಯುಎಪಿಎ ಅಡಿ ಬಂಧಿಸಬೇಕು, ಇವರು ಸಂಘಪರಿವಾರದ ವಿವಿಧ ಅಕ್ಟೋಪಸ್ ಇದ್ದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಸಮಾಜ ವಿರೋಧಿ ಶಕ್ತಿಗಳನ್ನ ಬಳಸಿಕೊಳ್ಳುತ್ತಿದೆ. ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಈ ರೀತಿ ಕೆಲಸ ಮಾಡುತ್ತಿದೆ. ಅಜಾನ್ ವಿರುದ‍್ಧ ಅಭಿಯಾನ ನಡೆಸುತ್ತಿರುವವರನ್ನ ಬಂಧಿಸಬೇಕು ಎಂದು ಹರಿಪ್ರಸಾದ್ ಒತ್ತಾಯಿಸಿದ್ದಾರೆ. : -- – -