2 ಕೋಟಿ ಬಂಪರ್ ! ಆಟೋ ಚಾಲಕನ ಮನೆಗೆ ಡ್ರೀಮ್ ಇಲೆವೆನ್ ನಲ್ಲಿ ಒಲಿದ ಲಕ್ಷ್ಮಿ ಕಟಾಕ್ಷ ಬೆಂಗಳೂರು, ಮೇ 08, 2022 (..):2 ಕೋಟಿ ರೂ. ಗೆದ್ದ ಅದೃಷ್ಟವಂತ. ಚಾಲಕರೊಬ್ಬರು ರಾತ್ರೋರಾತ್ರಿ ಕೋಟ್ಯಾಧಿಪತಿ ಆಗಿದ್ದಾರೆ! ಹೌದು. ಬಿಹಾರದ ರಮೇಶ್ ಕುಮಾರ್ ಡ್ರೀಮ್ ಇಲೆವೆನ್​ನಲ್ಲಿ 49 ರೂಪಾಯಿ ಹೂಡಿಕೆ ಮಾಡುವ ಮೂಲಕ 2 ಕೋಟಿ ರೂಪಾಯಿ ನಗದು ಬಹುಮಾನ ಗೆದ್ದಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಿಹಾರ್​ ಮೂಲದ ವ್ಯಕ್ತಿ ಈಗ ಕೋಟ್ಯಾಧಿಪತಿ ಆಗಿದ್ದಾರೆ. ಬಿಹಾರದ ಸರನ್ ಜಿಲ್ಲೆಯ ರಮೇಶ್ ತಮ್ಮ ಮೊಬೈಲ್ ಗೇಮ್ ಅಪ್ಲಿಕೇಶನ್ ಡ್ರೀಮ್ 11ನಲ್ಲಿ ತಮ್ಮ ಐಪಿಎಲ್ ತಂಡವನ್ನು ರಚಿಸಿದ್ದರು. ಅವರು ರಚಿಸಿದ್ದ ತಂಡವು ಮೊದಲನೇ ಸ್ಥಾನ ಪಡೆದಿದೆ. ಈ ಮೂಲಕ ರಮೇಶ್ ಎರಡು ಕೋಟಿ ರೂಪಾಯಿ ಮೊತ್ತವನ್ನು ಗೆದ್ದಿದ್ದಾರೆ.