ಭಾವಚಿತ್ರದೊಂದಿಗೆ ಚಾಮುಂಡಿ “ದರ್ಶನ”ಕ್ಕೆ ಆಗಮಿಸಿದ ಮಹಿಳೆ, ಮುಂದೇನಾಯ್ತು..? ಮೈಸೂರು, ಜು,13,2024: (..) ವರ್ಷದ ಮೊದಲ ಆಷಾಡ ಶುಕ್ರವಾರ ಹಿನ್ನೆಲೆ. ನಟ ದರ್ಶನ್ ಭಾವಚಿತ್ರ ಹಿಡಿದು ಚಾಮುಂಡೇಶ್ವರಿ ತಾಯಿ ದರ್ಶನಕ್ಕೆ ಆಗಮಿಸಿದ ಮಹಿಳಾ ಅಭಿಮಾನಿ. ಸರತಿ ಸಾಲಿನಲ್ಲಿ ಆಗಮಿಸುವ ವೇಳೆ ದರ್ಶನ್ ಭಾವಚಿತ್ರ ಪ್ರದರ್ಶನ. ದೇವಸ್ಥಾನದ ಒಳಗೆ ಭಾವಚಿತ್ರ ಕೊಂಡೋಯ್ಯುವಂತಿಲ್ಲ ಎಂದ ಪೊಲೀಸ್ ಸಿಬ್ಬಂದಿ. ಈ ವೇಳೆ ಪೊಲೀಸ್ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದ ದರ್ಶನ್ ಅಭಿಮಾನಿ. ಕೊನೆಗೂ ಸರತಿ ಸಾಲಿನಿಂದ ಮಹಿಳೆಯನ್ನ ಆಚೆ ಕಳುಹಿಸಿದ ಪೊಲೀಸ್ ಸಿಬ್ಬಂದಿ. ಸ್ಥಳೀಯರ ಮೊಬೈಲ್ ನಲ್ಲಿ ದೃಶ್ಯ ಸೆರೆ. ಕಾರಾಗೃಹದಲ್ಲಿ ನಟ: ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ ಹಾಗೂ ಇತರೆ ೧೩ ಮಂದಿಯನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕಳೆದ ಒಂದು ತಿಂಗಳಿಂದ ನಟ ದರ್ಶನ್‌ ಕಾನೂನು ಸಂಕಷ್ಟದಲ್ಲಿದ್ದು ಕಾರಾಗೃಹದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಟನ ಅಭಿಮಾನಿಗಳು ದರ್ಶನ್‌ ಬಿಡುಗಡೆಗೆ ದೈವದ ಮೊರೆ ಹೊಕ್ಕಿದ್ದು, ಮೈಸೂರಿನ ಚಾಮುಂಡಿಬೆಟ್ಟದಲ್ಲೂ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಆಗಮಿಸಿದ್ದ ಮಹಿಳಾ ಅಭಿಮಾನಿ ನಟ ದರ್ಶನ್‌ ಭಾವಚಿತ್ರ ಪ್ರದರ್ಶಿಸಿದ್ದು. : , , , ‘’ , , “ ?