ಪರೀಕ್ಷೆಗಳ ವಿಚಾರದಲ್ಲಿ ಡಾ.ಅಶ್ವತ್ಥ್ ನಾರಾಯಣ್ ಬಹಳ ಅನುಭವಸ್ಥರು: ಸಾಕಷ್ಟು ಜನರಿಗೆ ಸರ್ಟಿಫಿಕೆಟ್ ಕೊಡಿಸಿದ್ದಾರೆ- ಮಾಜಿ ಸಿಎಂ ಹೆಚ್.ಡಿಕೆ ಬೆಂಗಳೂರು,ಮೇ,5,2022(..):ಪರೀಕ್ಷೆಗಳ ವಿಚಾರದಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ್ ಬಹಳ ಅನುಭವಸ್ಥರು. ಪರೀಕ್ಷೆ ಬರೆಯದ ನರ್ಸ್​​ಗಳಿಗೆ ಸರ್ಟಿಫಿಕೇಟ್ ಕೊಡಿಸಿದ್ದಾರೆ ಎಂದು ಅಂತ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಈ ಹಿಂದೆ ನರ್ಸ್​ಗಳಿಗೆ ಸರ್ಟಿಫಿಕೆಟ್ ವಿಚಾರದಲ್ಲಿ ಡಾ.ಅಶ್ವತ್ಥ್ ನಾರಾಯಣ ಹೆಸರು ಕೇಳಿಬಂದಿತ್ತು. ರಾಜಕೀಯಕ್ಕೆ ಬರುವ ಮುನ್ನ ಡಾ.ಅಶ್ವಥ್ ನಾರಾಯಣ್ ಸಾಕಷ್ಟು ಜನರಿಗೆ ಸರ್ಟಿಫಿಕೆಟ್ ಕೊಡಿಸಿದ್ದಾರೆ. ಕಾಂಗ್ರೆಸ್​ ನವರು ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಬೇಕಿತ್ತು ಎಂದರು. ಪಿಎಸ್‌ಐ ನೇಮಕಾತಿಗೆ ಸಂಬಂಧ ಹಲವರು ಹಣ ನೀಡಿದ್ದಾರೆ. ಹಣ ನೀಡಿದ ಅಭ್ಯರ್ಥಿಗಳು ಈಗ ಜೈಲಿಗೆ ಹೋಗಬೇಕಾಗಿದೆ. ಈ ಹಿಂದೆ ಡ್ರಗ್ಸ್ ​​ನಲ್ಲಿ ಮಾಜಿ ಸಿಎಂ ಪ್ರಭಾವ ಇದೆ ಅಂದರು. ಅದು ಒಂದು ಹಂತಕ್ಕೆ ಬಂದು ನಿಂತಿ ಹೋಯ್ತು ಎಂದು ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದರು. 2008ರಲ್ಲಿ ಅಂದಿನ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೆವು. ಆಗ ಟನ್​​ಗಟ್ಟಲೇ ಮಾಹಿತಿ ಇಟ್ಟಿದ್ದೇನೆ. ಆಡಳಿತದ ಸರ್ಕಾರ ಎಲ್ಲ ವಿಚಾರದಲ್ಲೂ ಮೌನವಹಿಸಿದೆ. ಮೌನ ವಹಿಸಿವುದರ ಅರ್ಥವೇ ಪಾಲುದಾರರು ಎಂದರ್ಥ ಎಂದು ಹೆಚ್.ಡಿಕೆ ಕಿಡಿಕಾರಿದರು. : --- -