ಪಿಎಸ್ ಐ ನೇಮಕಾತಿ ಹಗರಣ: ಮತ್ತೊಬ್ಬ ಆರೋಪಿ ಅರೆಸ್ಟ್.. ಬೆಂಗಳೂರು,ಮೇ,5,2022(..):545 ಪಿಎಸ್ ಐ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಮತ್ತೊಬ್ಬ ಆರೋಪಿಯನ್ನ ಬಂಧಿಸಿದೆ. ಪಿಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದ ಅಭ್ಯರ್ಥಿ ಜಿ.ಸಿ ರಾಘವೇಂದ್ರ ಬಂಧಿತ ಆರೋಪಿ. ಬೆಂಗಳೂರಿನಲ್ಲಿ ರಾಘವೇಂದ್ರನನ್ನ ಸಿಐಡಿ ಬಂಧಿಸಿದೆ. ರಾಘವೇಂದ್ರ ಪಿಎಸ್ ಐ ಪರೀಕ್ಷೆಯಲ್ಲಿ 62ನೇ ರ್ಯಾಂಕ್ ಪಡೆದಿದ್ದ. ಮೊದಲ ಪೇಪರ್ 18, 2ನೇ ಪೇಪರ್ ನಲ್ಲಿ 126 ಅಂಕ ಪಡೆದಿದ್ದನು. ಓಎಂಆರ್ ಶೀಟ್ ವರದಿ ಆಧರಿಸಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರಾಘವೇಂದ್ರ ವಿರುದ್ಧ ಕೇಸ್ ದಾಖಲಾಗಿತ್ತು. ಪ್ರಕರಣ ಸಂಬಂಧ ಈವರೆಗೆ 22 ಆರೋಪಿಗಳ ಬಂಧನವಾಗಿದೆ. : -----.