ಹಗರಣದಲ್ಲಿ ಭಾಗಿಯಾಗಿದ್ರೆ ನನ್ನನ್ನ ಅರೆಸ್ಟ್ ಮಾಡಿ- ಶಾಸಕ ಪ್ರಿಯಾಂಕ್ ಖರ್ಗೆ ಸವಾಲು. ಬೆಂಗಳೂರು,ಮೇ,5,2022(..):ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ 3 ಬಾರಿ ನೋಟಿಸ್ ನೀಡಿದ ಹಿನ್ನೆಲೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಶಾಸಕ ಪ್ರಿಯಾಂಕ್ ಖರ್ಗೆ, ಸರ್ಕಾರಕ್ಕೆ ಭಯಬಿದ್ದು ಸಿಐಡಿ ನೋಟಿಸ್ ನೀಡುತ್ತಿದೆ. ಹೈಕಮಾಂಡ್ ಹೇಳಿದರೆ ಹಾಜರಾಗುತ್ತೇನೆ. ಪ್ರಕರಣ ಸಂಬಂಧ ಸಿಐಡಿಗೆ ಆಡಿಯೋ ತಲುಪಿಸುವ ಕೆಲಸ ಮಾಡುತ್ತೇನೆ. ಆಡಿಯೋ ಮತ್ತು ಪತ್ರಿಕೆ ತಲುಪಿಸುತ್ತೇನೆ ಎಂದರು. ಪಿಎಸ್ ಐ ಬಗ್ಗೆ ಸುದ್ದಿಗೋಷ್ಠಿ ನಂತರ ಬೆದರಿಕೆ ಬಂದಿದೆ. ನನ್ನ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ ಎಂದು ದೂರು ನೀಡಿದ್ದೆ. ಹಗರಣದಲ್ಲಿ ಭಾಗಿಯಾಗಿದ್ರೆ ನನ್ನನ್ನ ಅರೆಸ್ಟ್ ಮಾಡಿ ಎಂದು ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಸವಾಲ್ ಹಾಕಿದರು. : - - --- .