ಪಿಎಸ್ ಐ ನೇಮಕಾತಿ ಹಗರಣ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಸಿದ್ಧರಾಮಯ್ಯ. ಮೈಸೂರು,ಮೇ,5,2022(..): ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ನ್ಯಾಯಯುತ ತನಿಖೆ ಅಸಾಧ್ಯ. ಹೀಗಾಗಿ ನ್ಯಾಯಾಂಗ ತನಿಖೆ ನಡೆಸುವಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ. ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ಎಡಿಜಿಪಿಯೇ ಭಾಗಿಯಾಗಿದ್ದಾರೆ. ಇನ್ನು ಸಿಐಡಿಯಂದ ನ್ಯಾಯಯುತ ತನಿಖೆ ಹೇಗೆ ಸಾಧ್ಯ..? ಹೀಗಾಗಿ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಯಾಗಲಿ ಎಂದು ಆಗ್ರಹಿಸಿದರು. ಹಗರಣದಲ್ಲಿ ಸಚಿವರೇ ಭಾಗಿಯಾಗಿದ್ದಾರೆ. ನಿಜವಾದ ಆರೋಪಿಗಳನ್ನ ಬಂಧಿಸಿಲ್ಲ. ಮಧ್ಯವರ್ತಿಗಳನ್ನ ಮಾತ್ರ ಬಂಧಿಸಿದ್ದಾರೆ. ಅಶ್ವಥ್ ನಾರಾಯಣ್ ಕಡೆಯವರು ಇಬ್ಬರು ಇದ್ದಾರೆ. ಆಯ್ಕೆಯಾದ ದರ್ಶನ್ ಗೌಡನನ್ನ ಕರೆ ತಂದು ವಿಚಾರಣೆ ಮಾಡದೆ ಬಿಟ್ಟಿದ್ದಾರೆ. ನಿಷ್ಪಕ್ಷಪಾತ ತನಿಖೆ ಮಾಡುತ್ತಿಲ್ಲ. ನ್ಯಾಯಾಂಗ ತನಿಖೆಯಾದರೇ ಎಲ್ಲಾ ಸತ್ಯ ಹೊರ ಬರುತ್ತೆ ಎಂದರು. ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟೀಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ನೋಟಿಸ್ ನೀಡಲು ಸಿಐಡಿಗೆ ಅಧಿಕಾರವೇ ಇಲ್ಲ. ಪ್ರಿಯಾಂಖ್ ಖರ್ಗೆ ಸಾಕ್ಷಿಧಾರನಾ ಅಥವಾ ಅಪರಾಧಿನಾ..? ಸಿಐಡಿಯೇ ಪ್ರಿಯಾಂಕ್ ಖರ್ಗೆ ಬಳಿ ಹೋಗಲಿ ಎಂದು ತಿಳಿಸಿದರು. : - – – -- - … : , 5, 2022 (..): “ () . , ,” . , , “ . ? , .”“ . . . ’ . . . ,” .: / /