ರೀಪ್ ಬೆನಿಫಿಟ್ ಫೌಂಡೇಶನ್ ಜೊತೆ ಮೈಸೂರು ವಿವಿ ಒಪ್ಪಂದ. ಮೈಸೂರು,ಮೇ,5,2022(..):ನೂತನ ಆವಿಷ್ಕಾರ ಹಾಗೂ ವಿದ್ಯಾರ್ಥಿಗಳ ಹೊಸ ಆಲೋಚನೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮೈಸೂರು ವಿಶ್ವವಿದ್ಯಾಲಯವು ರೀಪ್ ಬೆನಿಫಿಟ್ ಫೌಂಡೇಶನ್‌ನೊಂದಿಗೆ ಗುರುವಾರ ಔಪಚಾರಿಕವಾಗಿ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿತು. ನಂತರ ಮಾತನಾಡಿದ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಎಂಬಿಎ ಹಾಗೂ ಎಂಎಸ್‌ಡಬ್ಲ್ಯೂ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯಲು ಹಾಗೂ ಹೊಸ ಬಗೆಯ ಚಿಂತನೆಗೆ ರೂಪ ನೀಡಲು ಈ ಒಪ್ಪಂದ ಸಹಕಾರಿಯಾಗಲಿದೆ. ಸಮಾಜದಲ್ಲಿ ನಾನಾ ಸಮಸ್ಯೆಗಳು ಇವೆ. ವಿದ್ಯಾರ್ಥಿಗಳು ಆ ಸಮಸ್ಯೆಗಳನ್ನು ಅಧ್ಯಯನ ನಡೆಸಿ, ದತ್ತಾಂಶ ಸಂಗ್ರಹಿಸಿ ಪರಿಹಾರ ನೀಡುವ ವಿನೂತನ ಕೆಲಸ ಮಾಡಲಿದ್ದಾರೆ. ಇದಕ್ಕೆ ರೀಪ್ ಬೆನಿಫಿಟ್ ಸಂಸ್ಥೆ ನಮ್ಮ ವಿವಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಜೊತೆಗೆ ಮಾಸಿಕ ಪ್ರೋತ್ಸಾಹ ಧನವನ್ನೂ ನೀಡುತ್ತದೆ. ಯುವಕರಿಗೆ ಧನಾತ್ಮಕತೆಯನ್ನು ತುಂಬುವುದು ಈ ಯೋಜನೆ ಉದ್ದೇಶವಾಗಿದೆ. ಸೃಜನಾತ್ಮಕ ಚಿಂತನೆಯಂತಹ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಅಲ್ಲದೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲಾಗುತ್ತದೆ. ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ವಿವಿಯ ಇತರೆ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಲಭ್ಯವಾಗಲಿದೆ ಎಂದು ತಿಳಿಸಿದರು. : - - - … , 5, 2022 (..): . , . . , -, , . “ . , . , ,” .“ . . . , , ,” .: / . . / /