ವಿದ್ಯಾರ್ಥಿಗಳೇ, ಕಾಲೇಜು ರಾಜಕೀಯಕ್ಕೆ ಬಲಿಯಾಗದಿರಿ- ಸಂಸದ ಪ್ರತಾಪ್ ಸಿಂಹ ಮೈಸೂರು,ಮೇ,4,2022(..): ವಿದ್ಯಾರ್ಥಿಗಳು ಕಾಲೇಜು ರಾಜಕೀಯಕ್ಕೆ ಬಲಿಯಾಗದೆ ಕಷ್ಟಪಟ್ಟು ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ. ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ಐಟಿಸಿ ಕಂಪನಿ ವತಿಯಿಂದ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನನಗೆ ಮೈಸೂರು ವಿವಿಯಲ್ಲಿ ಕಲಿಯುವ ಅವಕಾಶ ಸಿಗಲಿಲ್ಲ. ಆದರೆ ಸಂಸದನಾಗಿ ಪ್ರತಿನಿಧಿಸುವ ಅವಕಾಶ ಸಿಕ್ಕಿದೆ. ಹಾಗಾಗಿ ಮಕ್ಕಳಿಗೆ ಸಹಾಯ ಮಾಡುವುದು ನನ್ನ ಆದ್ಯ ಕರ್ತವ್ಯ. ಸದ್ಯ ಒಬಿಸಿ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಸಿಗುವಂತೆ ಮಾಡಿದೆ. ಇದೀಗ ಗುಣಮಟ್ಟದ ಲ್ಯಾಪ್ ಟಾಪ್ ಕೊಡಲಾಗುತ್ತಿದೆ. ಆದರೆ, ವಿದ್ಯಾರ್ಥಿಗಳೇ ಜಾತಿ ಮನಸ್ಥಿತಿಯಿಂದ ನೀವು ಹೊರ ಬನ್ನಿ. ಕೇವಲ ವಿದ್ಯಾರ್ಥಿ ಆಗಿ ಮೈಸೂರು ವಿವಿಗೆ ಬನ್ನಿ. ನಾನು ಗೌಡ, ಎಸ್ ಸಿ, ಲಿಂಗಾಯತ ಅಂತ ಬರಬೇಡಿ ಎಂದು ಹೇಳಿದರು. ವಿವಿ ರಾಜಕೀಯಕ್ಕೆ ಬಲಿಯಾಗಬೇಡಿ. ವಿವಿಯಲ್ಲಿ ಎಲ್ಲ ಅವರವರ ಜಾತಿಯವರನ್ನು ರಕ್ಷಿಸುತ್ತಿದ್ದಾರೆ. ಮೈಸೂರಿಗೆ ಒಂದು ಇನ್ ಕ್ಯೂಬಿಷನ್ ಸೆಂಟರ್ ಇಲ್ಲ. 81 ಕೋಟಿಯಲ್ಲಿ ಪ್ಲಾನಿಟೋರಿಯಂ ಬರುತ್ತಿದೆ. ವಿದ್ಯಾರ್ಥಿಗಳಿಗೆ ಕಾಲೇಜು ದಿನದಲ್ಲಿ ಯಾವ ಸಿದ್ಧಾಂತ ವಿಚಾರದ ಬಗ್ಗೆ ಜ್ಞಾನ ಇರುವುದಿಲ್ಲ. ರಾಜಕೀಯದಿಂದ ದೂರ ಇರಿ. ಕಷ್ಟಪಟ್ಟು ಓದಿ. ಜಾತಿ ಮೀರಿ ಬನ್ನಿ. ಎಲ್ಲರೂ ಒಂದಾಗಿ ವಿದ್ಯಾಭ್ಯಾಸ ಮಾಡಿ ಎಂದು ಕಿವಿಮಾತು ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಮಾತನಾಡಿ, ಮೂರು-ನಾಲ್ಕು ವರ್ಷದಲ್ಲಿ ಒಳ್ಳೆಯ ಸಂಶೋಧನೆ ಮಾಡಿ. ಉತ್ತಮ ಜರ್ನಲ್ ಪ್ರಕಟಿಸಿ. ವಿಶ್ವವಿದ್ಯಾಲಯದ ಘನತೆ ಎತ್ತಿ ಹಿಡಿಯಿರಿ. ಹೊಸ ಹಾದಿಯನ್ನು ನಿಮ್ಮ ಸಂಶೋಧನೆ ಕಂಡುಕೊಳ್ಳಬೇಕು. ಹೆಸರಿಗಷ್ಟೇ ಪಿಎಚ್.ಡಿ ಮಾಡಬೇಡಿ. ಡಾಕ್ಟರೇಟ್ ಸಿಕ್ಕ ಕೂಡಲೇ ಕೆಲಸ ಸಿಗುವುದಿಲ್ಲ. ಇದರೊಂದಿಗೆ ಕೌಶಲ್ಯವನ್ನೂ ವೃದ್ಧಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತು ಇದು. ನಿಂತಲ್ಲೇ ನಿಲ್ಲದಿರಿ ಎಂದು ಸಲಹೆ ನೀಡಿದರು. ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ಐಟಿಸಿ ಕಂಪನಿಗಳೇ ವಿವಿಯನ್ನು ನಡೆಸಿದರೆ ಒಳ್ಳೆಯದು. ಶಿಕ್ಷಣ ಇಲಾಖೆ ಬಗ್ಗೆ ಸರಕಾರಕ್ಕೆ ಗೌರವ ಇಲ್ಲ. ಜೊತೆಗೆ ಸರಕಾರವೇ ಎಲ್ಲಾ ಮಾಡಲು ಆಗುವುದಿಲ್ಲ. ಅಲ್ಲದೆ ವಿವಿಯಲ್ಲಿ ಬುದ್ಧಿವಂತರಿಗೆ ಅವಕಾಶ ಸಿಗಬೇಕು. ಕಂಪ್ಯೂಟರ್ ಇಲ್ಲದೆ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ತಂತ್ರಜ್ಞಾನ ಬಹಳ ವೇಗವಾಗಿ ಓಡುತ್ತಿದೆ. ವಿದ್ಯೆ ಇದ್ದರೆ ಎಲ್ಲಿ ಬೇಕಾದರೂ ಬದುಕಬಹುದು ಎಂದು ಹೇಳಿದರು. ಕುಲಸಚಿವ ಪ್ರೊ.ಆರ್. ಶಿವಪ್ಪ, ಐಟಿಸಿ ಅಸಿಸ್ಟೆಂಟ್ ಮ್ಯಾನೇಜರ್ ಪೂರ್ಣೇಶ್ ಎ.ಎಸ್., ಸಿಂಡಿಕೇಟ್ ಸದಸ್ಯರಾದ ಡಾ.ಈ.ಸಿ.ನಿಂಗರಾಜು, ಡಾ.ಚೈತ್ರ ನಾರಾಯಣ್, ಒಬಿಸಿ ಸೆಲ್ ಸಂಯೋಜಕ ಪ್ರೊ.ಬಿ.ವಿ.ಸುರೇಶ್ ಕುರ್ಮಾ, ಹಿಂದುಳಿದ ವರ್ಗಗಳ ವೇದಿಕೆ ಸದಸ್ಯ ಡಾ.ಗಪ್ಪಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು. : -- ’ - – -- … , 4, 2022 (..): - . , , , . , , “ ’ . . , . . . , . . , , , .”“ ’ . . . . 81 . . . . ,” . , . . , -, , . “ . . ’ .. . ’ .. . . ’ ,” .. . , , .., . .. , . , . .. , . .: / / /