ಮತ್ತೆ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ. ನವದೆಹಲಿ,ಏಪ್ರಿಲ್,4,2022(..):ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು ಇಂದು ಸಹ ತಲಾ 40 ಪೈಸೆ ದರ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸೋಮವಾರ ಲೀಟರ್​ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ತಲಾ 40 ಪೈಸೆ ಏರಿಸಿವೆ. ಇದರೊಂದಿಗೆ 14 ದಿನದಲ್ಲಿ 12ನೇ ಸಲ ಒಟ್ಟು 8.40 ರೂ. ತುಟ್ಟಿಯಾದಂತಾಗಿದೆ. ನಾಲ್ಕೂವರೆ ತಿಂಗಳ ವಿರಾಮದ ನಂತರ ಮಾ.22ರಂದು ಮೊದಲ ಬಾರಿಗೆ ಉಭಯ ಇಂಧನಗಳ ಬೆಲೆ ಏರಿಸಲಾಗಿತ್ತು. ನಂತರ ನಿರಂತರವಾಗಿ ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ 109,41 ರೂ, ಹಾಗೂ ಡೀಸೆಲ್ ಬೆಲೆ 93.23 ರೂ ಆಗಿದೆ. ಹಾಗೆಯೇ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 103.81, ಡೀಸೆಲ್ ಬೆಲೆ 95.07 ಆಗಿದೆ. : - - - - … , 4, 2022 (..): . , .0.40 .- . 0.40 . , 12 14 , . 8.40. 22 --- . . . 109.41 .93.23. . 103.81 .95.07.: / /