ಹಲಾಲ್ ನಿಷೇಧಿಸುವ ಬಗ್ಗೆ ಚಿಂತನೆ ನಡೆದಿದೆ- ಸಚಿವೆ ಶಶಿಕಲಾ ಜೊಲ್ಲೆ. ಚಿಕ್ಕೋಡಿ, ಏಪ್ರಿಲ್,1,2022(..):ಹಲಾಲ್ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹಿಂದೂ ಸಂಘಟನೆಗಳ ಪರ ಬ್ಯಾಟ್ ಬೀಸಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವೆ ಶಶಿಕಲಾ ಜೊಲ್ಲೆ, ಹಲಾಲ್ ಕಟ್ ನಿಷೇಧಕ್ಕೆ ಕೆಲ ಸಂಘಟನೆಗಳಿಂದ ಒತ್ತಾಯ ಕೇಳಿ ಬಂದಿದೆ. ಹಿಂದೂ ಸಂಘಟನೆಗಳು ಮಾಡುತ್ತಿರುವುದು ಸರಿ ಇದೆ. ಹಲಾಲ್ ನಿಷೇಧದ ಬಗ್ಗೆ ಚಿಂತನೆ ನಡೆದಿದೆ. ಝಟ್ಕಾ ಕಟ್ ರಾಜ್ಯಾದ್ಯಂತ ಜಾರಿಯಾಗಬೇಕು ಎಂದು ತಿಳಿಸಿದರು. : –- - -