ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನ ಗೆಲ್ಲಲೇಬೇಕು- ರಾಜ್ಯ ‘ಕೈ’ ನಾಯಕರಿಗೆ ರಾಹುಲ್ ಗಾಂಧಿ ಕರೆ. ಬೆಂಗಳೂರು,ಏಪ್ರಿಲ್,1,2022(..):ಕರ್ನಾಟಕದಲ್ಲಿ ಎಂದೆಂದಿಗೂ ಕಾಂಗ್ರೆಸ್ ಗೆ ಸ್ಪಿರಿಟ್ ಇದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನ ಗೆಲ್ಲಲೇ ಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ನೀಡಿದರು. ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಇರುವುದು ಅನೈತಿಕ ಬಿಜೆಪಿ ಸರ್ಕಾರ. ನಾವು ಕರ್ನಾಟಕದಲ್ಲಿ ಚುನಾವಣೆಯನ್ನ ಎದುರು ನೋಡುತ್ತಿದ್ದೇವೆ. ನಾವು ಕಡಿಮೆ ಅಂತರದಿಂದ ಗೆಲ್ಲುವ ಗುರಿ ಹೊಂದಬಾರದು. ಮುಂದಿನ ಎಲೆಕ್ಷನ್​ನಲ್ಲಿ 150 ಸ್ಥಾನಗಳನ್ನ ಗೆಲ್ಲಲೇಬೇಕು. ಕರ್ನಾಟಕದಲ್ಲಿ 150 ಸ್ಥಾನಗಳನ್ನ ಗೆಲ್ಲುವುದು ಕಷ್ಟವಲ್ಲ ಒಗ್ಗಟ್ಟಾಗಿ, ಸರಿಯಾದ ವಿಚಾರ ಕೈಗೆತ್ತಿಕೊಂಡರೆ ಗೆಲ್ಲಬಹುದು ಎಂದು ಸಲಹೆ ನೀಡಿದರು. ಹಾಗೆಯೇ ನಾವು ಇಷ್ಟ-ಕಷ್ಟದ ಆಧಾರದ ಮೇಲೆ ಮಣೆ ಹಾಕಲ್ಲ. 20 ವರ್ಷಗಳ ಹಿಂದೆ ಮಾಡಿದ್ದು ಈಗ ನಡೆಯೋದಿಲ್ಲ. ಪಕ್ಷಕ್ಕೆ ಕೆಲಸ ಮಾಡುವವರನ್ನ ಪಕ್ಷ ರಕ್ಷಣೆ ಮಾಡುತ್ತದೆ. ಕಡಿಮೆ ಅಂತರದಲ್ಲಿ ಗೆಲ್ಲಲು ಎಲೆಕ್ಷನ್ ​ನಲ್ಲಿ ಸ್ಪರ್ಧಿಸಬಾರದು. 150 ಸ್ಥಾನಗಳಲ್ಲಿ ಒಂದೂ ನಂಬರ್ ಕಡಿಮೆಯಾಗಬಾರದು. ನಾವು ನಮ್ಮ ಕಾರ್ಯಕರ್ತರನ್ನ ಮರೆಯಬಾರದು. ಕಾಂಗ್ರೆಸ್ ಸರ್ಕಾರ ಬಂದರೆ ಕಾರ್ಯಕರ್ತರಿಗೆ ಅಧಿಕಾರ ಎಂದು ರಾಹುಲ್ ಗಾಂಧಿ ಹೇಳಿದರು. : - - -150 - -