ಸಿದ್ಧರಾಮಯ್ಯ ಹುಣಸೂರಿಗೆ ಬರಲಿ, ಹಳೆಯದನ್ನ ಮರೆತು ನಾವೇ ಗೆಲ್ಲಿಸುತ್ತೇವೆ- ಹೆಚ್.ವಿಶ್ವನಾಥ್ ಆಹ್ವಾನ. ಮೈಸೂರು,ಮಾರ್ಚ್,29,2022(..):ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಪದೇ ಪದೇ ಟೀಕಾಪ್ರಹಾರ ನಡೆಸುತ್ತಿದ್ಧ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಇದೀಗ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮಗಳ ಜತೆ ಇಂದು ಮಾತನಾಡಿರುವ ಎಂಎಲ್ ಸಿ ಹೆಚ್.ವಿಶ್ವನಾಥ್, ಸಮಾಜದ ಬೆಳವಣಿಗೆಗೆ ಸಿ‍ದ್ಧರಾಮಯ್ಯ ಮಾರಕವಾಗಿದ್ದಾರೆ. ಕುರುಬರಿಗೆ ಇದ್ಧ ಎಲ್ಲಾ ಕ್ಷೇತಗಳೂ ಈಗ ದೂರವಾಗಿದೆ. ಬಾದಾಮಿಯಲ್ಲಿ ಚಿಮ್ಮನಕಟ್ಟಿಗೆ ಸಿದ‍್ಧರಾಮಯ್ಯ ಅನ್ಯಾಯ ಮಾಡಿದರು. ಹುಣಸೂರು, ಕೆಆರ್ ನಗರದಲ್ಲಿ ನನ್ನನ್ನ ಸೋಲಿಸಿದ್ರು. ಈಗ ಅವರಿಗೆ ಒಂದು ಕ್ಷೇತ್ರ ಇಲ್ಲದಂತಾಗಿದೆ ಎಂದು ವ್ಯಂಗ್ಯವಾಡಿದರು. ಹಾಗೆಯೇ ಕ್ಷೇತ್ರ ಹುಡುಕುತ್ತಿರುವ ಸಿದ್ಧರಾಮಯ್ಯ ಹುಣಸೂರಿಗೆ ಬರಲಿ ಹಳೆಯದನ್ನ ಮರೆತು ನಾವೇ ಗೆಲ್ಲಿಸುತ್ತೇವೆ ಎಂದು ಹೆಚ್.ವಿಶ್ವನಾಥ್ ಆಹ್ವಾನ ನೀಡಿದರು. : ---.-