ಕಲ್ಲಡ್ಕ ಪ್ರಭಾಕರ್ ವಿರುದ್ಧ ಪ್ರತಿಭಟನೆ: ಮಂಗಳೂರು ವಿವಿಗೆ ಮುತ್ತಿಗೆ ಹಾಕಲು ಸಿಎಫ್ ಐ ಕಾರ್ಯಕರ್ತರ ಯತ್ನ. ಮಂಗಳೂರು,ಮಾರ್ಚ್,30,2022(..):ಮಂಗಳೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಅತಿಥಿಯಾಗಿ ಆಹ್ವಾನಿಸಿರುವ ಹಿನ್ನೆಲೆ ಇದನ್ನ ವಿರೋಧಿಸಿ ಸಿಎಫ್ ಐ ಕಾರ್ಯುಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕಲ್ಲಡ್ಕ ಪ್ರಭಾಕರ್ ಅವರಿಂದ ಮಂಗಳೂರು ವಿವಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿರುವ ಸಿಎಫ್ ಐ ಕಾರ್ಯಕರ್ತರು ಮಂಗಳೂರು ಗೇಟ್ ಎದುರು ನುಗ್ಗಿ ಪ್ರತಿಭಟನೆಗೆ ಮುಂದಾದರು. ಕಲ್ಲಡ್ಕ ಪ್ರಭಾಕರ್ ಕೋಮು ಪ್ರಚೋದನೆ ಭಾಷಣಕಾರ. ಅವರ ಹೆಸರು ಕೈಬಿಡುವಂತೆ ಆಗ್ರಹಿಸಿದರು. ಮಂಗಳೂರು ವಿವಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾನಿರತ ಸಿಎಫ್ ಐ ಕಾರ್ಯಕರ್ತರನ್ನ ಪೊಲೀಸರು ತಡೆದಿದ್ದು, ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ವಾಗ್ವಾದ ನಡೆದು ಹೈಡ್ರಾಮಾ ಸೃಷ್ಟಿಯಾಯಿತು. : -- -- … : , 30, 2022 (..): , , . . ., .: / / / /