ನಮ್ಮ ಕುಟುಂಬದ ವ್ಯವಹಾರ ತೆರೆದ ಪುಸ್ತಕ: ತಾಯಿ ಚೆನ್ನಮ್ಮಗೆ ಐಟಿ ನೋಟಿಸ್ ಕುರಿತು ಹೆಚ್.ಡಿಕೆ ಪ್ರತಿಕ್ರಿಯೆ. ಬೆಂಗಳೂರು,ಮಾರ್ಚ್,28,2022(..):ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಆಸ್ತಿ ವಿವರ ನೀಡುವಂತೆ ಕೋರಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಐಟಿ ನೋಟಿಸ್ ನೀಡಿದ್ದು ಈ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ನಮ್ಮ ತಾಯಿಗೆ ನೋಟಿಸ್ ನೀಡಿದ್ದಾರೆ. ಆದರೆ ನಾವು ತಲೆ ಕೆಡಿಸಿಕೊಳ್ಳಲ್ಲ. ನಮ್ಮ ಕುಟುಂಬ ಯಾವುದೇ ಅಕ್ರಮ ಆಸ್ತಿ ಸಂಪಾದನೆ ಮಾಡಿಲ್ಲ. ನೋಟೀಸ್ ಗೆ ನಾವು ಹೆದರಲ್ಲ. ನಾವು ಪರುಶುದ್ಧವಾಗಿದ್ದರೇ ಹೆದರುವ ಅಗತ್ಯವಿಲ್ಲ . ಇದನ್ನ ರಾಜಕೀಯವಾಗಿ ಬಳಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ. ನಮ್ಮ ಕುಟುಂಬದ ವ್ಯವಹಾರ ತೆರೆದ ಪುಸ್ತಕ. ನಾವೆಂದಿಗೂ ದುಡ್ಡಿಗೆ ಮಹತ್ವ ಕೊಟ್ಟವರಲ್ಲ. ನಾವು ಪರಿಶುದ‍್ಧರಾಗಿದ್ದಾಗ ಯಾರೂ ಏನು ಮಾಡಲು ಆಗಲ್ಲ. ಆದಾಯ ತೆರಿಗೆ ಇಲಾಖೆ ಕೇಳಿರುವ ವಿವರ ನೀಡಿದರೆ ಆಯಿತು ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. : - – -