ನಾನು ಅರಗ ಜ್ಞಾನೇಂದ್ರ ರಾಜೀನಾಮೆ ಕೇಳಲ್ಲ: ಅವರ ಆತ್ಮಸಾಕ್ಷಿಗೆ ಬಿಡುತ್ತೇನೆ-ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರು,ಮಾರ್ಚ್,24,2022(..):ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಕುಸಿದಿದೆ. ಬಿಜೆಪಿಯವರ ತಾರತಮ್ಯ ನೀತಿಯಿಂದ ರಕ್ಷಣೆ ಇಲ್ಲದಂತಾಗಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದರು. ಇಂದು ಸದನದಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಅರಗ ಜ್ಞಾನೇಂದ್ರ ಅಪರೂಪಕ್ಕೆ ಮಂತ್ರಿಯಾಗಿದ್ದಾರೆ ಎಂದರು. ಈ ವೇಳೆ ಏನೋ ನಿಮ್ಮ ಕೃಪೆ ಎಂದ ಅರಗ ಜ್ಞಾನೇಂದ್ರ ಉತ್ತರಿಸಿದರು. ನೀವು ಮಂತ್ರಿಯಾಗಿದ್ದಕ್ಕೆ ನನ್ನ ಅಭ್ಯಂತರ ಇಲ್ಲ. ನಾನು ಅರಗ ಜ್ಞಾನೇಂದ್ರ ಅವರ ರಾಜೀನಾಮೆ ಕೇಳಲ್ಲ ಇದನ್ನು ಅವರ ಆತ್ಮಸಾಕ್ಷಿಗೆ ಬಿಡ್ತೇನೆ ಎಂದರು. ಹಿಜಾಬ್ ಪರ ಬ್ಯಾಟ್ ಬೀಸಿದ ಸಿದ್ಧರಾಮಯ್ಯ, ಮುಸ್ಲೀಂ ಧರ್ಮಗುರುಗಳು ನನ್ನನ್ನ ಭೇಟಿ ಮಾಡಿ ದುಪ್ಪಟ್ಟಕ್ಕೆ ಅವಕಾಶ ಕೊಡಿಸಲು ಮನವಿ ಮಾಡಿದರು. ಸ್ಕಾರ್ಫ್, ದುಪ್ಪಟ್ಟ ಹಿಜಾಬ್ ಬೇರೆ. ನಾನು ಈ ರೀತಿ ಶಲ್ಯ ಹಾಕಿದ್ದೇನೆ ಅವರಿಗೆ ದುಪ್ಪಟ್ಟ ಹಾಕಲು ಅವಕಾಶ ಕೊಡಿ ಎಂದು ಆಗ್ರಹಿಸಿದರು. : --