‘ಆರ್‌ಆರ್‌ಆರ್’ ಚಿತ್ರದ ಕಲೆಕ್ಷನ್ ಟಾರ್ಗೆಟ್ 800 ಕೋಟಿ ! ಮೈಸೂರು, ಮಾರ್ಚ್ 25, 2022 (..):‘ಆರ್‌ಆರ್‌ಆರ್’ ಚಿತ್ರದ ಕಲೆಕ್ಷನ್ ಟಾರ್ಗೆಟ್ 800 ಕೋಟಿಗೂ ಅಧಿಕ ಎನ್ನಲಾಗಿದೆ. ಹೌದು ‘ಆರ್‌ಆರ್‌ಆರ್’ ಚಿತ್ರದ ಕಲೆಕ್ಷನ್ ಟಾರ್ಗೆಟ್ ಕಡಿಮೆ ಏನು ಇಲ್ಲ. ಬರೋಬ್ಬರಿ 800 ಕೋಟಿಗೂ ಅಧಿಕ ಗಳಿಕೆಯ ಲೆಕ್ಕಾಚಾರವನ್ನು ಹಾಕಿಕೊಂಡಿದೆ ‘ಆರ್‌ಆರ್‌ಆರ್’ ತಂಡ. ‘ಆರ್‌ಆರ್‌ಆರ್’ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ಈ ಚಿತ್ರಕ್ಕೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಹೀಗಾಗಿ ಚಿತ್ರತಂಡಕ್ಕೆ ಒಟ್ಟಾರೆಯಾಗಿ 800 ಕೋಟಿಗೂ ಅಧಿಕ ಮೊತ್ತ ಕಲೆಹಾಕುವ ಟಾರ್ಗೆಟ್ ಇದೆ. ಇನ್ನು ಸದ್ಯಕ್ಕೆ ‘ಆರ್‌ಆರ್‌ಆರ್’ ಚಿತ್ರದ ಟಿಕೆಟ್ ದರವನ್ನು ನೋಡಿದರೆ, ಸಿನಿಮಾ ತಪ್ಪದೇ ಸಾವಿರ ಕೋಟಿ ಕಲೆ ಹಾಕುತ್ತದೆ ಎನ್ನುವ ಸೂಚನೆ ಕೊಟ್ಟಿದೆ.