ಹಿಜಾಬ್ ನಿರ್ಬಂಧ ಪ್ರಕರಣ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ. ನವದೆಹಲಿ,ಮಾರ್ಚ್,24,2022(..):ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧ ಪ್ರಕರಣವನ್ನ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮತ್ತೆ ನಿರಾಕರಿಸಿದೆ. ಹಿಜಾಬ್ ಪ್ರಕರಣ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್‌ಗೆ ವಿದ್ಯಾರ್ಥಿನಿ ಐಶಾತ್ ಶಿಫಾ ಮನವಿ ಮಾಡಿದ್ದರು. ಅರ್ಜಿ ತುರ್ತು ವಿಚಾರಣೆಗೆ ಸಿಜೆಐ ರಮಣ ನಿರಾಕರಿಸಿದ್ದು, ಹಿಜಾಬ್‌ ಗೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ವಿಷಯಗಳನ್ನು ಅತಿರಂಜಿತಗೊಳಿಸಬೇಡಿ ಎಂದು ಹೇಳಿದ್ದಾರೆ. ಅರ್ಜಿದಾರ ವಿದ್ಯಾರ್ಥಿನಿ ಪರ ದೇವದತ್ತ ಕಾಮತ್ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು. ಶಾಲಾ ಕಾಲೇಜುಗಳಲ್ಲಿ ಸರ್ಕಾರದ ಸಮವಸ್ತ್ರ ಸಂಹಿತೆ ಆದೇಶವನ್ನ ಹೈಕೋರ್ಟ್ ಎತ್ತಿ ಹಿಡಿದು ತೀರ್ಪು ನೀಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ವಿದ್ಯಾರ್ಥಿನೀಯರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. : – - –- , 24, 2022 (..): ’ . ’ . . , . . . ’ . ’ .: / /