ಕ್ಷೌರಿಕ ಕಾಯಕದಲ್ಲಿ ಜನಸೇವೆ: ಮುತ್ತುರಾಜ್ ಗೆ ಗೌರವ ಡಾಕ್ಟರೇಟ್ ನೀಡುವಂತೆ ಹೆಚ್.ವಿಶ್ವನಾಥ್ ಮನವಿ. ಮೈಸೂರು,ಮಾರ್ಚ್,23,2022(..):ಕ್ಷೌರಿಕ ಕಾಯಕದಲ್ಲಿ ಜನಸೇವೆ ಮಾಡುತ್ತಿರುವ ಮುತ್ತುರಾಜ್ ಅವರಿಗೆ ಗೌರವ ಡಾಕ್ಟರೇಟ್ ನೀಡುವಂತೆ ಕೆ.ಎಸ್.ಓ.ಯುಗೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮನವಿ ಮಾಡಿದ್ದಾರೆ. ಮುಂದಿನ ತಿಂಗಳು KSOUನ ಘಟಿಕೋತ್ಸವ ನಡೆಯಲಿದ್ದು, ಮುತ್ತುರಾಜ್ ಗೆ ಗೌರವ ಡಾಕ್ಟರೇಟ್ ನೀಡುವಂತೆ ಕೆ.ಎಸ್.ಓ.ಯು ನ ಕುಲಪತಿ ಡಾ. ವಿದ್ಯಾಶಂಕರ್ ಗೆ ಎಂಎಲ್ ಸಿ ಹೆಚ್.ವಿಶ್ವನಾಥ್ ಮನವಿ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾರಿಂದ ಪ್ರೇರೇಪಿತರಾಗಿ ಮುತ್ತುರಾಜ್ ಅವರು ಉಚಿತ ಸೇವೆ ಮಾಡುತ್ತಿದ್ದಾರೆ. ಬೆಂಗಳೂರಿನ ಮೈಳನಹಳ್ಳಿಯ ನಿವಾಸಿಯಾಗಿರುವ ಕ್ಷೌರಿಕ ಮುತ್ತುರಾಜ್ ಬಹಳಷ್ಟು ವರ್ಷಗಳಿಂದ ದಲಿತ ಕೇರಿಗಳಲ್ಲಿ ಕ್ಷೌರ ಮಾಡಿ ಚಳುವಳಿ ಆರಂಭಿಸಿದ್ದಾರೆ. ಅಲ್ಲದೆ ನೆಲ್ಸನ್ ಮಂಡೇಲಾ ಅವರ ಜನ್ಮದಿನದಂದು ಜೈಲುವಾಸಿಗಳಿಗೆ ಉಚಿತ ಕ್ಷೌರ ಮಾಡುತ್ತಾರೆ. ರಾಜ್ಯದ ನಾನಾ ಭಾಗದ ಹಳ್ಳಿಗಳಿಗೆ ತೆರಳಿ ಕ್ಷೌರ ಮಾಡುವ ಮೂಲಕ ಮುತ್ತುರಾಜ್ ಕ್ಷೌರ ಕ್ರಾಂತಿ ಆರಂಭಿಸಿದ್ದಾರೆ. : -­ --.