ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ : ಎಲ್ಲಾ ಪರಿಸ್ಥಿತಿಗೆ ಕಾಂಗ್ರೆಸ್ ನವರೇ ಕಾರಣ ಹೊಣೆ- ಗೃಹ ಸಚಿವ ಅರಗ ಜ್ಞಾನೇಂದ್ರ. ಬೆಂಗಳೂರು,ಮಾರ್ಚ್,23,2022(..):ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲಾ ಪರಿಸ್ಥಿತಿಗೆ ಕಾಂಗ್ರೆಸ್ ನವರೇ ಕಾರಣ ಹೊಣೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕಿಡಿ ಕಾರಿದ್ದಾರೆ. ಈ ಕುರಿತು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಹಿಜಾಬ್ ತೀರ್ಪು ವಿರೋಧಿಸಿ ಅಂಗಡಿ ಬಂದ್ ಮಾಡಿ ಒಂದು ಕೋಮಿನಿಂದ ಪ್ರತಿಭಟನೆ ನಡೆಸಿದರು. ಅದರ ಮುಂದುವರೆದ ಭಾಗವಾಗಿ ಇದು ನಡೆಯುತ್ತಿದೆ. ಇದು ಖಂಡಿತ ದುರದೃಷ್ಟಕರ. ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಇಲ್ಲ. ಮಾಹಿತಿ ತರಿಸಿಕೊಳ್ಳುತ್ತೇನೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು. ಈ ಎಲ್ಲಾ ಪರಿಸ್ಥಿತಿಗೆ ಕಾಂಗ್ರೆಸ್ ನವರೇ ಕಾರಣ, ಹೊಣೆ ಅಧಿಕಾರಕ್ಕೆ ಒಂದು ಕೋಮಿನ ಒಲೈಕೆ ಮಾಡಿ ಈ ದೇಶದ ಎಲ್ಲ ಸಮುದಾಯದ ಮನಸ್ಸನ್ನ ಒಡೆದರು ಎಂದು ಅರಗ ಜ್ಞಾನೇಂದ್ರ ಕಿಡಿಕಾರಿದರು. : - - –