ಬೆಂಗಳೂರಿನ ಮಧ್ಯವರ್ತಿಗಳು ಮತ್ತು ಏಜೆಂಟರಿಗೆ ಎಸಿಬಿ ಶಾಕ್: 9 ಕಡೆಗಳಲ್ಲಿ ದಾಳಿ, ದಾಖಲೆ ಪರಿಶೀಲನೆ. ಬೆಂಗಳೂರು,ಮಾರ್ಚ್,22,2022(..):ಬೆಂಗಳೂರಿನಲ್ಲಿ ಮಧ್ಯವರ್ತಿಗಳು ಮತ್ತು ಏಜೆಂಟರನ್ನ ಗುರಿಯಾಗಿಸಿಕೊಂಡು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು ನಗರದ ಬಿಡಿಎ ಮಧ್ಯವರ್ತಿಗಳ ಕಚೇರಿ, ನಿವಾಸಗಳ ಮೇಲೆ ಎಸಿಬಿ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದು ಪರಿಶೀಲಿಸುತ್ತಿದ್ದಾರೆ. ಒಟ್ಟು 9 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಸುಮಾರು 100 ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ, ಮಹತ್ವದ ದಾಖಲೆಗಳ ಪರಿಶೋಧನೆಯಲ್ಲಿ ತೊಡಗಿದ್ದಾರೆ. ಮಧ್ಯವರ್ತಿಗಳಾದ ಅಶ್ವತ್, ರಘು ಬಿ.ಎನ್, . ಮುನಿರತ್ನ ಅಲಿಯಾಸ್ ರತ್ನವೇಲು, ಮೋಹನ್, ಮನೋಜ್, ತೇಜು, ರಾಮ, ಲಕ್ಷ್ಮಣ, ಚಿಕ್ಕಹನುಮ್ಮಯ್ಯ ಎಂಬುವವರ ನಿವಾಸದ ಮೇಲೆ ಎಸಿಬಿ ದಾಳಿಯಾಗಿದೆ. ದಾಳಿ ವೇಳೆ ಬ್ರೋಕರ್ ಅಶ್ವಥ್ ಮನೆಯಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳು ಪತ್ತೆಯಾಗಿವೆ. ಮರ್ಸಿಡಿಸ್ ಬೆಂಜ್, ಇನ್ನೋವಾ, ಆಡಿಕಾರು ಪತ್ತೆಯಾಗಿದೆ . ಇನ್ನು ಮೋಹನ್ ಮನೆಯಲ್ಲಿ 4.5 ಕೆಜಿ ಚಿನ್ನ ಪತ್ತೆಯಾಗಿದೆ ಎನ್ನಲಾಗಿದೆ. : –- –