ಉಕ್ರೇನ್ ನಿಂದ 572 ಕನ್ನಡಿಗರು ವಾಪಸ್: ಪ್ರಧಾನಿ ಮೋದಿ ಭಗೀರಥ ಪ್ರಯತ್ನದಿಂದ ಇದು ಸಾಧ್ಯ – ಸಿಎಂ ಬಸವರಾಜ ಬೊಮ್ಮಾಯಿ. ದಾವಣಗೆರೆ,ಮಾರ್ಚ್,21,2022(..):ಉಕ್ರೇನ್ ನಲ್ಲಿ ರಷ್ಯಾ ದಾಳಿ ವೇಳೆ ಮೃತ ನವೀನ್ ಬಾಡಿ ಹುಟ್ಟೂರು ತಲುಪಿದೆ. ಇದು ಪ್ರಧಾನಿ ಮೋದಿ ಭಗೀರಥ ಪ್ರಯತ್ನದಿಂದ ಸಾಧ್ಯವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಉಕ್ರೇನ್ ನಲ್ಲಿ ನವೀನ್ ಮೃತಪಟ್ಟಿದ್ದು ದುರ್ಧೈವ. ಪ್ರಧಾನಿ ಮೋದಿ ಭಗೀರಥ ಪ್ರಯತ್ನದಿಂದ ನವೀನ್ ಮೃತದೇಹ ಹುಟ್ಟೂರಿಗೆ ತರಲಾಗಿದೆ. ಮೋದಿ ವರ್ಚಸ್ಸಿಗೆ ಇದು ಒಂದು ಉದಹಾರಣೆ ಎಂದರು. ಈವರೆಗೆ ಉಕ್ರೇನ್ ನಿಂದ 572 ಕನ್ನಡಿಗರನ್ನ ವಾಪಸ್ ಕರೆತರಲಾಗಿದೆ. ಅಪರೇಷನ್ ಗಂಗಾ ಮೂಲಕ ಕರೆತರಲಾಗಿದೆ. ಇದು ಪ್ರಧಾನಿ ಮೋದಿ ಭಗೀರಥ ಪ್ರಯತ್ನದಿಂದ ಸಾಧ್ಯವಾಗಿದೆ. ಅಮೇರಿಕಾ ಕೂಡ ತನ್ನ ದೇಶದವನ್ನರ ವಾಪಸ್ ಕರೆತರುವ ಯೋಜನೆ ಕೈಬಿಟ್ಟಿದೆ. ಹೀಗಾಗಿ ಬೇರೆ ದೇಶದ ಸಹಕಾರ ಪಡೆಯೋದು ಅಷ್ಟು ಸುಲಭ ಅಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. : --- …. 572 : ’ – , 21, 2022 (..): , ’ . . , , “’ . . .”“ 572 - , . . . , ,” .: 572 / /