ಡೈರೆಕ್ಟರ್ ಕ್ಯಾಪ್ ಧರಿಸಲಿದ್ದಾರೆ ನಟ ಅಜಯ್ ರಾವ್ ! ಬೆಂಗಳೂರು, ಮಾರ್ಚ್ 21, 2022 (..):ನಿರ್ದೇಶಕನಾಗಿ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತೇನೆ ಎಂದು ನಟ ಕೃಷ್ಣ ಅಜಯ್ ರಾವ್ ಹೇಳಿದ್ದಾರೆ. ಕೃಷ್ಣ ಅಜಯ್ ರಾವ್ ಅವರು ಲವ್ ಯೂ ರಚ್ಚು ಸಿನಿಮಾದ ಬಳಿಕ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಮಂಜು ಸ್ವರಾಜ್ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ಶೀಘ್ರವೇ ಸಿನಿಮಾ ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನೊಂದು ಒಳ್ಳೆ ಸ್ಕ್ರಿಪ್ಟ್‍ಗಾಗಿ ಹುಡುಕುತ್ತಿದ್ದೇನೆ. ನನ್ನ ಟೀಮ್ ಸಹ ಇದಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿದೆ. ಮಂಜು ಸ್ವರಾಜ್ ಬಳಿಕ ಹೊಸ ಸ್ಕ್ರಿಪ್ಟ್ ಹೊಸ ಜವಾಬ್ದಾರಿ ನಿರ್ವಹಿಸಲು ಸಿದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.