ಹುಟ್ಟಹಬ್ಬದ ಶುಭಕೋರಿ ನಟ ಅಪ್ಪು ಸ್ಮರಿಸಿದ ಹೆಚ್.ಡಿಡಿ ಸೇರಿ ಹಲವು ಗಣ್ಯರು. ಬೆಂಗಳೂರು,ಮಾರ್ಚ್,17,2022(..):ನಟ ದಿ.ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಹಿನ್ನೆಲೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸೇರಿ ಹಲವು ಗಣ್ಯರು ಟ್ವೀಟ್ ಮಾಡಿ ನಟ ಅಪ್ಪುವನ್ನ ಸ್ಮರಿಸಿದ್ದಾರೆ. ಗಂಧಧಗುಡಿ ಎಂಬ ಕಿರೀಟಕ್ಕೆ ಮುಕುಟಮಣಿಯಾದ ಅಜಾತಶತ್ರು ದಿ।। ಶ್ರೀ ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಅವರನ್ನು ಸ್ಮರಿಸಿ ನನ್ನ ಗೌರವ ಮತ್ತು ಪ್ರೀತಿಯ ನಮನ ಸಲ್ಲಿಸಲು ಇಚ್ಛಿಸುತ್ತೇನೆ. ಅಪ್ರತಿಮ ನಟನಾಗಿ, ಮಾದರಿ ಮನುಷ್ಯನಾಗಿ ಸಾರ್ಥಕ ಬಾಳು ಬದುಕಿದ ಅವರು ಕನ್ನಡಿಗರ ಹೃದಯದಲ್ಲಿ ಅಜರಾಮರರಾಗಿ ಉಳಿಯಲಿದ್ದಾರೆ ಎಂದು ಹೆಚ್.ಡಿ ದೇವೇಗೌಡರು ಟ್ವಿಟ್ಟರ್ ನಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರನ್ನ ಸ್ಮರಿಸಿದ್ದಾರೆ. ಹಾಗೆಯೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ, ಕನ್ನಡ ಚಿತ್ರರಂಗದ ಅಸ್ತಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಮರೆಯಲಾಗದ ಆ ತಾರೆಗೆ ನನ್ನ ಭಾವಪೂರ್ಣ ನಮನಗಳು. ಕನ್ನಡಿಗರ ಪಾಲಿಗೆ ಸದಾ ಸ್ಫೂರ್ತಿಯ ಚಿಲುಮೆ ಆಗಿರುವ ಅವರು ನಮ್ಮ ಪಾಲಿಗೆ ಸದಾ ಅಮರ ಎಂದಿದ್ದಾರೆ. ಇನ್ನು ರಾಜರತ್ನನ ಹುಟ್ಟುಹಬ್ಬಕ್ಕೆ ಟ್ವಿಟ್ಟರ್ ನಲ್ಲಿ ಶುಭಕೋರಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ, ಪುನೀತ್ ರಾಜಕುಮಾರ್ ನಮ್ಮಿಂದ ಕಣ್ಮರೆಯಾಗಿದ್ದರೂ ಸರಳ,‌ ಸಜ್ಜನಿಕೆ, ಪ್ರೀತಿ, ಆತ್ಮವಿಶ್ವಾಸದಿಂದ ಕೂಡಿದ್ದ ಅವರ ಪ್ರತಿಭಾಶಾಲಿ ವ್ಯಕ್ತಿತ್ವ ಪ್ರೇರಕಶಕ್ತಿಯಾಗಿ ಕೋಟ್ಯಂತರ ಹೃದಯದಲ್ಲಿ ಅಜರಾಮರ. ಹುಟ್ಟುಹಬ್ಬದ ದಿನ ಅಪ್ಪುವನ್ನು ಪ್ರೀತಿ ಮತ್ತು ದು:ಖದಿಂದ ಸ್ಮರಿಸುತ್ತೇನೆ ಎಂದಿದ್ದಾರೆ. : --