ಮೌಂಟ್ ಎವರೆಸ್ಟ್ ನಲ್ಲಿ ನಟ ‘ಅಪ್ಪು ಹುಟ್ಟುಹಬ್ಬ’ ಆಚರಿಸಿದ ಬೆಂಗಳೂರಿನ ಫ್ಯಾನ್ಸ್. ಬೆಂಗಳೂರು,ಮಾರ್ಚ್,17,2022(..):ಇಂದು ನಟ ದಿ. ಪುನೀತ್​ ರಾಜ್​ಕುಮಾರ್ ಅವರ ಜನ್ಮದಿನ ಅವರಿಲ್ಲ ಎಂಬ ನೋವಿನಲ್ಲೂ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇನ್ನು ಅಪ್ಪು ಹೀರೋ ಆಗಿ ಕಾಣಿಸಿಕೊಂಡ ಕೊನೆಯ ಸಿನಿಮಾ ‘ಜೇಮ್ಸ್​’ ಚಿತ್ರ ಸಹ ಇಂದು ಬಿಡುಗಡೆಯಾಗಿದೆ. ವಿಶ್ವದ ಸುಮಾರು 4,000 ಜೇಮ್ಸ್ ಚಿತ್ರ ತೆರೆಕಂಡಿದ್ದು, ರಾಜ್ಯದ ಹಲವು ಸಿನಿಮಾ ಥಿಯೇಟರ್ ಗಳ ಬಳಿ ಅಭಿಮಾನಿಗಳು ಹಲವೆಡೆ ಸಾಮಾಜಿಕ ಕಾರ್ಯಗಳ ಮೂಲಕ ಪುನೀತ್​ ಜನ್ಮದಿನವನ್ನು ಆಚರಿಸಿದರೆ, ಇಲ್ಲಿ ಬೆಂಗಳೂರಿನ ಅಭಿಮಾನಿಗಳು ಮೌಂಟ್ ಎವರೆಸ್ಟ್​​ನಲ್ಲಿ ಅಪ್ಪು ಜನ್ಮದಿನವನ್ನು ಆಚರಿಸಿದ್ದಾರೆ. ಹೌದು, ವಿಶೇಷ ರೂಪದಲ್ಲಿ ಪುನೀತ್ ಜನ್ಮದಿನ ಆಚರಿಸಿದವರು ಬೆಂಗಳೂರಿನ ಅಭಿಮಾನಿಗಳು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್​ನಿಂದ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ, ಪುನೀತ್​ಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. : - -