ಸಾಲದ ಶೂಲಕ್ಕೆ ಸಿಲುಕಿದ ಕೂಲಿ ಕಾರ್ಮಿಕ ಆತ್ಮಹತ್ಯೆಗೆ ಶರಣು. ಮೈಸೂರು,ಮಾರ್ಚ್,15,2022(..):ಸಾಲದ ಶೂಲಕ್ಕೆ ಸಿಲುಕಿದ ಕೂಲಿ ಕಾರ್ಮಿಕ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ವಾಜಮಂಗಲ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಾಗರಾಜ್(35) ಮೃತ ಕಾರ್ಮಿಕ. ಗ್ರಾಮದಲ್ಲಿ ನಾಗರಾಜ್ ಸೆಲೂನ್ ವೃತ್ತಿ ಮಾಡುತ್ತಿದ್ದು, ಕೊರೋನಾ ಹಿನ್ನಲೆ ವಹಿವಾಟಿಗೆ ಪೆಟ್ಟುಬಿದ್ದಿತ್ತು. ಆದಾಯ ಇಲ್ಲದ ಕಾರಣ ನಾಗರಾಜ್ ಸಾಲ ಮಾಡಿಕೊಂಡಿದ್ದು, ಇತ್ತೀಚೆಗೆ ಗಾರೆ ಕೆಲಸವನ್ನ ಅವಲಂಬಿಸಿದ್ದ. ಸಾಲದ ಹೊರೆ ಹೆಚ್ಚಾಗಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ನಾಗರಾಜ್, ಮನನೊಂದು ಕ್ರಿಮಿನಾಶಕ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - -