ಹಿಜಾಬ್ ಕುರಿತ ಹೈಕೋರ್ಟ್ ತೀರ್ಪು: ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಪ್ರತಿಕ್ರಿಯೆ ಏನು..? ಬೆಂಗಳೂರು,ಮಾರ್ಚ್,15,2022(..):ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ಇಲ್ಲ ಎಂದು ಹೇಳಿ ಸರ್ಕಾರದ ವಸ್ತ್ರಸಂಹಿತೆ ಆದೇಶ ಎತ್ತಿ ಹಿಡಿದ ಹೈಕೋರ್ಟ್ ತೀರ್ಪಿನ ಕುರಿತು ವಿಪಕ್ಷ ನಾಯಕ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಸಿದ‍್ಧರಾಮಯ್ಯ, ಹಿಜಾಬ್ ನಿಂದ ಯಾರಿಗೂ ತೊಂದರೆಯಾಗಲ್ಲ ಎಂದಿದ್ದವು ಈ ಹಿಂದೆಯೂ ಹಿಜಾಬ್ ಧರಿಸಿದ್ದಾರೆ. ಈಗಲೂ ಧರಿಸುತ್ತಿದ್ದಾರೆ. ಧರಿಸಲಿ ಬಿಡಿ ಎಂದಿದ್ದವು. ಈಗ ಕೋರ್ಟ್ ಆದೇಶ ನೀಡಿದೆ ಅದನ್ನ ಪಾಲಿಸಬೇಕು. ಇದರಿಂದ ನಮಗೆ ಕಪಾಳಮೋಕ್ಷ ಆಗಿದೆ ಎನ್ನಲಾಗಲ್ಲ ಎಂದು ತಿಳಿಸಿದರು. ಹೈಕೋರ್ಟ್ ತೀರ್ಪಿನ ಬಗ್ಗೆ ವ್ಯಾಖ್ಯಾನ ಮಾಡಲ್ಲ. ಹೈಕೋರ್ಟ್ ತೀರ್ಪನ್ನ ಎಲ್ಲರೂ ಪಾಲಿಸಬೇಕು ಎಂದು ಸಿದ್ಧರಾಮಯ್ಯ ತಿಳಿಸಿದರು. : - –