ಚಾಮುಂಡೇಶ್ವರಿ ಕ್ಷೇತದಲ್ಲಿ ಮತ್ತೆ ಸ್ಪರ್ಧಿಸುವುದಿಲ್ಲ: ಮಾಜಿ ಸಿಎಂ ಸಿದ್ಧರಾಮಯ್ಯ ಬೆಂಗಳೂರು, ಮಾರ್ಚ್ 13, 2022 (..):ನಾನು ಚಾಮುಂಡೇಶ್ವರಿ ಕ್ಷೇತದಲ್ಲಿ ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಘೋಷಿಸಿದ್ದಾರೆ. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡಲ್ಲ‌. ನನಗೆ ಈಗಾಗಲೇ ನಾಲ್ಕೈದು ಕ್ಷೇತ್ರದಿಂದ ನಿಲ್ಲಲ್ಲು ಹೇಳುತ್ತಿದ್ದಾರೆ. ಆದರೆ ಈವರೆಗೂ ತೀರ್ಮಾನ ಮಾಡಿಲ್ಲ. ಈ ಬಗ್ಗೆ ಯೋಚನೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇಂದು ಮಂಡ್ಯದ ಮದ್ದೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಜೆ.ಡಿಎಸ್ ಜೊತೆ ಅಲೈಯನ್ಸ್ ಆದ್ರು ಮಾಡ್ಕೊಳ್ಳಿ. ಅಂಡ್ರಸ್ಟ್ಯಾಂಡಿಗಾದ್ರು ಮಾಡ್ಕೊಳ್ಳಿ. ಮ್ಯಾಚ್ ಫಿಕ್ಸಿಂಗ್ ಆದ್ರು ಮಾಡ್ಕೊಳ್ಳಿ. ನಾವು ಈ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ. ಮುಂದೆ‌ ಕಾಂಗ್ರೆಸ್ ಅಧಿಕಾರಕ್ಕೆ ತರುವುದೆ ನಮ್ಮ ಗುರಿ. ನಾನು‌ ಕಾಂಗ್ರೆಸ್ ನಲ್ಲಿ ನೆಮ್ಮದಿಯಾಗಿದ್ದೇನೆ. ರಾಜಕಾರಣದಲ್ಲಿ ಆಸೆಗಳಿರಬೇಕು ಆದ್ರೆ ದುರಾಸೆ ಇರಬಾರದು ಎಂದು ತಿಳಿಸಿದರು.