ಚಲನಚಿತ್ರೋತ್ಸವ ಉದ್ಘಾಟಿಸಿದ್ದು ಸಾಕಷ್ಟು ಖುಷಿ ತಂದಿದೆ- ನಟಿ ತಾರಾ ಅನುರಾಧ. ಮೈಸೂರು,ಮಾರ್ಚ್,12,2022(..):ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಮಾಡಿದ್ದು ಸಾಕಷ್ಟು ಖುಷಿ ಆಗಿದೆ ಎಂದು ನಟಿ ತಾರಾ ಅನುರಾಧ ಸಂತಸ ವ್ಯಕ್ತಪಡಿಸಿದರು. ಮೈಸೂರು ರಂಗಾಯಣ, ಬಿ.ವಿ ಕಾರಂತ ರಂಗಚಾವಡಿಯಲ್ಲಿ ಆಯೋಜಿಸಿದ್ಧ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಟಾಟಿಸಿ ನಟಿ ತಾರಾ ಅನುರಾಧ ಮಾತನಾಡಿದರು. ಬಾಲ‌ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟೆ. ಜೀವನದಲ್ಲಿ ಚಲನಚಿತ್ರ ವೃತ್ತಿಯಾಗಿ ಬದಲಾವಣೆ ಆಯ್ತ. ಅನುರಾಧ ಆಗಿದ್ದ ನಾನು ತಾರ ಆಗಿ ಬದಲಾವಣೆ ಮಾಡಿದ್ದು ಚಲನಚಿತ್ರ. ಚಲನಚಿತ್ರದಲ್ಲಿ ರಾಜಕೀಯ ಬೆರೆಸಿಕೊಳ್ಳಲು ನಾನು ಎಂದು ಬಿಟ್ಟಿಲ್ಲ. ಚಲನಚಿತ್ರ ಒಂದು ಸಮಗ್ರ ಕಲೆ. ಬೆಳ್ಳಿಪರದೆ ಮೇಲೆ ಕತ್ತಲೆಯಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವುದು ಚಲನಚಿತ್ರ ಕಲೆ. ಒಳ್ಳೆಯ ಚಿತ್ರಗಳನ್ನು ಜನಸಾಮಾನ್ಯರುಗಳಿಗೆ ತಲುಪಿಸುವುದು ಚಿತ್ರೋತ್ಸವದ ಉದ್ದೇಶ ಅಷ್ಟೆ ಎಂದು ಹೇಳಿದರು. : - -- . … : , 12, 2022 (..): “ ,” . , , .. .“ . . , , . . . . ,” .: / / /