ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಹೆಸರು ಫೈನಲ್. ಬೆಂಗಳೂರು,ಮಾರ್ಚ್,11,2022(..):ರಾಜ್ಯ ವಿಧಾನ ಪರಿಷತ್ತಿಗೆ ವಾಯುವ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನ ಅಂತಿಮಗೊಳಿಸಿದೆ. ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಎಂ.ವಿ ರವಿಶಂಕರ್ ಆಯ್ಕೆಯಾಗಿದ್ದಾರೆ. ಕಳದ ಬಾರಿ ಕಡಿಮೆ ಅಂತರದಿಂದ ಸೋಲುಂಡಿದ್ದ ರವಿಶಂಕರ್ ರನ್ನ ಅಭ್ಯರ್ಥಿ ಆಯ್ಕೆ ಫೈನಲ್ ಮಾಡಿದೆ. ವಾಯುವ್ಯ ಶಿಕ್ಷಕರ ಕ್ಷೇತ್ರಕ್ಕೆ ಅರುಣ್ ಶಹಾಪುರ್, ವಾಯುವ್ಯ ಪದವೀಧರ ಕ್ಷೇತ್ರಕ್ಕೆ ಹನುಮಂತ ರುದ್ರಪ್ಪ ನಿರಾಣಿ ಅವರ ಹೆಸರನ್ನ ಬಿಜೆಪಿ ಫೈನಲ್ ಮಾಡಿದೆ. : - - -