ಬಿಎಸ್ ವೈ ಮುಕ್ತ ಬಿಜೆಪಿ ಮಾಡಿದ್ದಾರೆ: ನೀವು ಮತ್ತೆ ಸಿಎಂ ಆಗಲ್ಲ –ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು. ಬೆಂಗಳೂರು,ಮಾರ್ಚ್,11,2022(..):ನಿನ್ನೆಯಷ್ಟೆ ಪ್ರಕಟಗೊಂಡ ಪಂಚರಾಜ್ಯಗಳ ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಮಾಜಿ ಸಿಎಂಗಳ ನಡುವೆ ಟಾಕ್ ವಾರ್ ನಡೆಯಿತು. ಬಿಎಸ್ ಯಡಿಯೂರಪ್ಪ ವಿಪಕ್ಷಗಳ ಕಾಲೆಳೆದರೇ ಅವರಿಗೆ ವಿಪಕ್ಷ ನಾಯಕ ಸಿದ್ಧರಮಯ್ಯ ತಿರುಗೇಟು ನೀಡಿದ ಪ್ರಸಂಗ ಕಂಡು ಬಂದಿತು. ವಿಧಾನಸಭೆಯಲ್ಲಿ ಮಾತನಾಡಿದ ಬಿಎಸ್ ವೈ ರಾಜ್ಯದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು. ಇದಕ್ಕೆ ತಿರುಗೇಟು ನೀಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಬಿಎಸ್ ವೈ ಮುಕ್ತ ಬಿಜೆಪಿ ಮಾಡಿದ್ದಾರೆ. ಬಿಎಸ್ ಯಡಿಯೂರಪ್ಪ ಅವರೇ ಮತ್ತೆ ನೀವು ಸಿಎಂ ಆಗಲ್ಲ. ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಕೊಟ್ಟಾಗ ಕಣ್ಣೀರು ಹಾಕಿದ್ರು. ಸುಮ್ನೆ ಕಣ್ಣೀರು ಬರ್ತಾದಾ..? ನೋವಾಗಿ ಕಣ್ಣೀರು ಬರೋದು. ಬಿಎಸ್ ವೈ ಇತ್ತೀಚೆಗೆ ಜನರ ಬಳಿ ಹೋಗಿಲ್ಲ ಅನ್ಸುತ್ತೆ. ನಿಮ್ಮನ್ನು ಹೊರ ಹಾಕಿದಾಗಲೇ ಜನ ನಿರ್ಧರಿಸಿದ್ದಾರೆ ಬಿಜೆಪಿಯನ್ನ ಹೊರ ಹಾಕಲು ಜನ ನಿರ್ಧರಿಸಿದ್ದಾರೆ. ಉತ್ತರ ಪ್ರದೇಶ ಚುನಾವಣೆ ಬೇರೆ . ಕರ್ನಾಟಕ ಚುನಾವಣೆ ಬೇರೆ ಎಂದು ನುಡಿದರು. ಈ ವೇಳೆ ಸಿದ್ಧರಾಮಯ್ಯಗೆ ತಿರುಗೇಟು ನೀಡಿದ ಬಿಎಸ್ ವೈ, ನಾನು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದೆ. ಬೊಮ್ಮಾಯಿಯನ್ನ ಸಿಎಂ ಮಾಡಿದೆ. ನಾನು ಮತ್ತೆ ಸಿಎಂ ಆಗುವ ಪ್ರಶ್ನೆಯೇ ಇಲ್ಲ. 135 ಸ್ಥಾನ ಗೆದ್ದ ಮತ್ತೆ ಬಿಜೆಪಿ ಅಇಕಾರಕ್ಕೆ ತರುತ್ತೇವೆ. ವಿಪಕ್ಷ ಸ್ಥಾನದಲ್ಲಿ ಕೂರಲು ಮಾನಸಿಕವಾಗಿ ಸಿದ್ಧರಾಗಿ. ನೀವು ಶಾಶ್ವತವಾಗಿ ವಿಪಕ್ಷದಲ್ಲೇ ಇರ್ತೀರಿ. ನಾವು ಆಡಳಿತ ಪಕ್ಷದಲ್ಲೇ ಇರುತ್ತೇವೆ ಎಂದು ಕಾಲೆಳೆದರು. …. : ’ – , 11, 2022 (..): . .. .“ , . , , . ’ .”“ . …? . . . ’ . ,” . , .. , “ . . . 135 . . .”: / .. / / : -- -