ಪತ್ನಿ ಹತ್ಯೆಗೈದು ಪತಿಯೂ ಆತ್ಮಹತ್ಯೆಗೆ ಶರಣು. ಧಾರವಾಡ,ಮಾರ್ಚ್,11,2022(..):ಪತ್ನಿ ಹತ್ಯೆಗೈದು ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಗಣೇಶನಗರದಲ್ಲಿ ಈ ಘಟನೆ ನಡೆದಿದೆ. ಮನೀಷಾ(25) ಪತಿಯಿಂದಲೇ ಹತ್ಯೆಯಾದ ಪತ್ನಿ. ಗಂದಗವಾಲೆ(30) ಎಂಬಾತನೇ ತನ್ನ ಪತ್ನಿಯನ್ನ ಹತ್ಯೆಗೈದು ತಾನೂ ಆತ್ಮಹತ್ಯೆಗೆ ಶರಣಾಗಿರುವುದು. ಕಳೆದ ರಾತ್ರಿ ದಂಪತಿ ಮಧ್ಯೆ ಗಲಾಟೆ ನಡೆದಿದ್ದು ನಂತರ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : -- – -