ಪಂಚರಾಜ್ಯ ಚುನಾವಣೆ ರಾಜ್ಯದ ಮೇಲೂ ಸಕರಾತ್ಮಕ ಪರಿಣಾಮ ಬೀರಲಿದೆ- ಸಿಎಂ ಬಸವರಾಜ ಬೊಮ್ಮಾಯಿ. ಬೆಂಗಳೂರು,ಮಾರ್ಚ್,10,2022(..): ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸಿಎಂ ಬಸವರಾಜ ಬೊಮ್ಮಾಯಿ , ಪಂಚರಾಜ್ಯ ಚುನಾವಣೆ ರಾಜ್ಯದ ಮೇಲೂ ಸಕರಾತ್ಮಕ ಪರಿಣಾಮ ಬೀರಲಿದೆ ಎಂದಿದ್ದಾರೆ. ಈ ಕುರಿತು ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪಂಚರಾಜ್ಯ ಚುನಾವಣೆಯಲ್ಲಿ ವಿರೋಧಪಕ್ಷವಾದ ಕಾಂಗ್ರೆಸ್ ಅನ್ನು ಮತದಾರರು ಧೂಳಿಪಟ ಮಾಡಿದ್ದಾರೆ. ಮೋದಿಯವರನ್ನು ಏಕೈಕನಾಯಕರನ್ನಾಗಿ ಹೊರ ಹೊಮ್ಮಿಸಿದ್ದಾರೆ. ಭಾರತದುದ್ದಕ್ಕೂ ಜನಮೆಚ್ಚಿದ ನಾಯಕನನ್ನಾಗಿ ಮೋದಿಯವರನ್ನು ಜನರು ಹೊರ ಹೊಮ್ಮಿಸಿದ್ದಾರೆ. ಈ ಮೂಲಕ ನವ ಭಾರತ ನಿರ್ಮಾಣದ ಕನಸು ಅನುಷ್ಠಾನಕ್ಕಾಗಿ ಸಕಾರಗೊಳಿಸಿದ್ದಾರೆ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ ನಲ್ಲಿ ರಾಜ್ಯಕ್ಕೆ ಬರಲಿದ್ದಾರೆ. ಪಂಚರಾಜ್ಯದ ಚುನಾವಣೆಯು ರಾಜ್ಯದ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ. ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದಂತ ಮತದಾರರಿಗೆ, ಕಾರ್ಯಕರ್ತರಿಗೆ ಅಭಿನಂದನೆಗಳು, ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು. : ----