ಬೆಂಗಳೂರಿನಲ್ಲಿ ಗ್ಯಾಂಗ್ ಸ್ಟರ್ ಬಂಧನ: ಪಿಸ್ತೂಲ್ ಮೊಬೈಲ್ ವಶಕ್ಕೆ. ಬೆಂಗಳೂರು,ಮಾರ್ಚ್,8,2022(..):ಬೆಂಗಳೂರಿನಲ್ಲಿ ಅತ್ತಿಬೆಲೆ ಪೊಲೀಸರು ಮುಂಬೈ​ನ ಗ್ಯಾಂಗ್ ​ಸ್ಟರ್ ಬಂಧಿಸಿ ಪಿಸ್ತೂಲ್, ಮೊಬೈಲ್ ಸಿಮ್ ಕಾರ್ಡ್ ವಶಕ್ಕೆ ಪಡೆದಿದ್ದಾರೆ. ​ ಅಬ್ದುಲ್‌ ಅಜೀಜ್ ಖಾನ್ ಬಂಧಿತ ಗ್ಯಾಂಗ್​ಸ್ಟರ್. ಕೊಲೆ‌, ದರೋಡೆ, ಬೆದರಿಕೆ, ಡ್ರಗ್ಸ್ ಪ್ರಕರಣಗಳು ಸೇರಿ ಒಟ್ಟು 37‌ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಬ್ದುಲ್‌ ಅಜೀಜ್ ಖಾನ್ ಬಂಧನ ಮಾಡಲಾಗಿದೆ. ಅತ್ತಿಬೆಲೆ ರೆಸ್ಟೋರೆಂಟ್​ನಲ್ಲಿ ಅಡಗಿದ್ದ ವೇಳೆ ದಾಳಿ ಮಾಡಿ ಸೆರೆ ಹಿಡಿಯಲಾಗಿದೆ. ಗ್ಯಾಂಗ್​ಸ್ಟರ್​ ಬಳಿ ಪಿಸ್ತೂಲ್, ನಾಲ್ಕು ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. 15 ಸಿ‌ಮ್‌ ಕಾರ್ಡ್​ಗಳು, 6 ಮೊಬೈಲ್ ಫೋನ್​ಗಳು​ ಜಪ್ತಿ ಮಾಡಲಾಗಿದೆ. : – – .