ಖಗೋಳದ ‘ ರಿಯಲ್ ಟೈಂ ಡೇಟಾ’ : ದೇಶದ ಮೊದಲ ಅತ್ಯಾಧುನಿಕ ಖಗೋಳ ತಾರಾಲಯಕ್ಕೆ ಮೈಸೂರಿನಲ್ಲಿ ಅಡಿಗಲ್ಲು ಹಾಕಿದ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಮೈಸೂರು, ಮಾ.06, 2022 : (.. ) ಯುವ ಮನಸ್ಸುಗಳೇ ಬನ್ನಿ , ಇಲ್ಲಿ ಸಿಗುವ ಜ್ಞಾನವನ್ನು ಪಡೆದುಕೊಂಡು ಬೇರೆಡೆ ಪಸರಿಸಿ. ಆ ಮೂಲಕ ಭಾರತವನ್ನು ವಿಶ್ವಗುರು ಮಾಡೋಣ ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಕರೆ ನೀಡಿದರು. ಮೈಸೂರು ವಿಶ್ವವಿದ್ಯಾನಿಲಯ ಮತ್ತು ಭಾರತೀಯ ಖಗೋಳ ಭೌತಶಾಸ ಸಂಸ್ಥೆ ವತಿಯಿಂದ ನಗರದ ಚಾಮುಂಡಿಬೆಟ್ಟದ ಪಾದದ ಬಳಿ ಹಮ್ಮಿಕೊಂಡಿದ್ದ ಕಾಸ್ಮೋಲಜಿ ಶಿಕ್ಷಣ ಮತ್ತು ಸಂಶೋಧನಾ – ತರಬೇತಿ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಾಕಷ್ಟು ಹೆಣ್ಣು ಮಕ್ಕಳು ಬಂದಿದ್ದಾರೆ. ಇವರೆ ನಮ್ಮ ಭವಿಷ್ಯ . ಅವರೆಲ್ಲರೂ ತಾರೆಗಳಂತೆ ಹೊಳೆಯುತ್ತಿದ್ದಾರೆ. ಇವರೆಲ್ಲರೂ ವಿಜ್ಞಾನಿಗಳಾಗಿ ದೇಶದ ಕೀರ್ತಿ ಪತಾಕಿ ಹಾರಿಸಬೇಕು. ಯುವ ವಿಜ್ಞಾನಿಗಳು ಸಂಶೋಧನೆ ಮತ್ತು ತರಬೇತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಖಗೋಳ ತಾರಾಲಯ ಸ್ಥಾಪನೆಯಾದ ಮೇಲೆ ಹಳೆದು, ಹೊಸದು ಅಂತ ಸಾಕಷ್ಟು ಡೇಟಾ (ಅಂಕಿಅಂಶಗಳು) ಸಂಗ್ರಹವಾಗುತ್ತದೆ. ಆದರೆ, ಬರೀ ಶೇಖರಣೆಯಾದರೆ ಪ್ರಯೋಜನವಿಲ್ಲ ಅದು ಬಳಕೆಯಾಗಬೇಕು. ಬಳಕೆಯಾಗಲು ಸೂಕ್ತವಾಗಿ ಮಾರ್ಗದರ್ಶನ ಮಾಡುವವರು ಬೇಕು. ಅಂತಹ ಸಲಹೆಗಾರರು ಮೈಸೂರು ವಿವಿಯಲ್ಲಿ ಇದ್ದಾರೆ. ಯುವ ವಿಜ್ಞಾನಿಗಳು ತಾರಾಲಯದ ಡೇಟಾವನ್ನು ಸರಿಯಾಗಿ ಬಳಸಿಕೊಂಡರೆ ಜನರಿಗೆ, ದೇಶಕ್ಕೆ, ಸಮಾಜಕ್ಕೆ ಒಳ್ಳೆಯದು ಆಗುತ್ತದೆ ಎಂದರು. ಮೈಸೂರು ವಿವಿ ಕಲೆ, ಕಲಾವಿದರ ತವರೂರು. ಈ ವಿವಿ ಬಗ್ಗೆ ನನಗೆ ಹೆಮ್ಮೆ ಇದೆ. ಸಾಕಷ್ಟು ಕೆಲಸಗಳು ಇಲ್ಲಿ ಆಗುತ್ತಿದೆ. ಕರ್ನಾಟಕದ ಐಎಎಸ್ ಅಧಿಕಾರಿಯೊಬ್ಬರು ನನಗೆ ಆಪ್ತ ಸಲಹಾಗಾರರಾಗಿದ್ದರು. ನನಗೆ ತಾರಾಲಯ ಸ್ಥಾಪನೆ ಐಡಿಯಾ ಕೊಟ್ಟವರು ಅವರೇ. ನಂತರ ಪ್ರೊ.ಕೆ.ವಿಜಯ ರಾಘವನ್ ಯೋಜನೆಯ ರೂಪುರೇಷೆ ತಯಾರಿಸಿದರು. ಮೈಸೂರು ವಿಶ್ವವಿದ್ಯಾಲಯ ಅನುಷ್ಠಾನಕ್ಕೆ ಹೆಚ್ಚಿನ ಸಹಕಾರ ನೀಡಿತು ಎಂದು ತಿಳಿಸಿದರು. ಸಂಸದ ಪ್ರತಾಪಸಿಂಹ ಮಾತನಾಡಿ, ಶತಮಾನೋತ್ಸವ ಆಚರಿಸಿದ ದೇಶದ ನಾಲ್ಕು ವಿವಿಗಳಲ್ಲಿ ಮೈಸೂರು ವಿಶ್ವವಿದ್ಯಾಲಯವೂ ಒಂದು. ನಿರ್ಮಲ ಸೀತಾರಾಮನ್ ಬಂದ ಮೇಲೆ ದೇಶದ ಆರ್ಥಿಕ ವ್ಯವಸ್ಥೆ ಸದೃಢವಾಗುತ್ತಿದೆ. ಚೀನಾಕ್ಕಿಂತ ಭಾರತದ ಜಿಡಿಪಿ ಶೇ.9.2ರಷ್ಟು ಹೆಚ್ಚುವ ಮುನ್ಸೂಚನೆ ಸಿಕ್ಕಿದೆ. ಮೈಸೂರು ವಿವಿಗೆ ಇನ್‌ಕ್ವಿಬಿಟಿ ಸೆಂಟರ್ ಅವಶ್ಯಕತೆ ಇದ್ದು , ಅದನ್ನು ಮಂಜೂರು ಮಾಡಿಕೊಡಬೇಕೆಂದು ಹಣಕಾಸು ಸಚಿವರಲ್ಲಿ ಮನವಿ ಮಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಮೈಸೂರು ವಿವಿ ಸ್ಥಾಪನೆಗೆ ಮೈಸೂರು ಅರಸರ ಕೊಡುಗೆ ಅಪಾರವಾಗಿದೆ. ಅದರಲ್ಲೂ ಜಯಚಾಮರಾಜ ಒಡೆಯರ್ ಅವರನ್ನು ಈ ವೇಳೆ ಸ್ಮರಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಶ್ರೀ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರವೊಂದನ್ನು ತೆರೆದಿದ್ದೇವೆ. ಈ ತಾರಾಲಯ ಉದಯೋನ್ಮುಖ, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಿಜ್ಞಾನದ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಹಾಗೂ ಪ್ಲಾನಿಟೋರಿಯಂ ನಿರ್ಮಾಣದಿಂದ ಆಕಾಶಕಾಯಗಳ ಬಗೆಗೆ ಹೆಚ್ಚಿನ ಸಂಶೋಧನೆಯನ್ನು ನಡೆಸಲು ಅನುಕೂಲವಾಗಲಿದೆ ಎಂದರು. ಡಿಜಿಟಲ್ ಡಿಸ್‌ಪ್ಲೆಗಳ ಮೂಲಕ ಖಗೋಳದ ಆ ಕ್ಷಣದ ಮಾಹಿತಿಯನ್ನು ನೇರವಾಗಿ ಪಡೆದುಕೊಳ್ಳಬಹುದಾದ(ರಿಯಲ್ ಟೈಂ ಡೇಟಾ)ದೇಶದ ಮೊದಲ ಅತ್ಯಾಧುನಿಕ ಖಗೋಳ ತಾರಾಲಯ ಮೈಸೂರಿನಲ್ಲಿ ನಿರ್ಮಾಣವಾಗುತ್ತಿದೆ.ಡಿಜಿಸ್ಟಾರ್ ವ್ಯವಸ್ಥೆಯು 7 ಸಿಸ್ಟಮ್ ಮತ್ತು ಡೊಮೆಕ್ಸ್ ಸ್ಕ್ರೀನ್ ಅನ್ನು ಒಳಗೊಂಡಿದೆ. ವಿಶಿಷ್ಟ ಹಿನ್ನೆಲೆಯುಳ್ಳ ಎಂಜಿನ್ ಒಳಗೊಂಡಿರುವ ಈ ಕೇಂದ್ರ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪರಿಣಾಮಕಾರಿ ತರಬೇತಿ ನೀಡಲು ಅನುಕೂಲವಾಗಲಿದೆ ಎಂದು ತಿಳಿಸಿದರು. ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಕೆ.ವಿಜಯ ರಾಘವನ್, ಆಟಾಮಿಕ್ ಎನರ್ಜಿ ಇಲಾಖೆ ಕೆ.ಎನ್.ವ್ಯಾಸ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ಎಸ್.ಚಂದ್ರಶೇಖರ್ ಹಾಗೂ ಭಾರತೀಯ ಖಗೋಳ ಭೌತಶಾಸ ಸಂಸ್ಥೆ ನಿರ್ದೇಶಕಿ ಪ್ರೊ.ಅನ್ನಪೂರ್ಣಿ ಸುಬ್ರಮಣಿಯಂ ಇದ್ದರು. ಮೈಸೂರು ವಿವಿ ಕುಲಸಚಿವ ಪ್ರೊ.ಬಿ.ಶಿವಪ್ಪ ವಂದನಾರ್ಪಣೆ ಮಾಡಿದರು. : -- : , 06, 2022 (..): ‘ ,’ , . . , , “ . . . . .” “ () , . , , . . , . , ,” . “ . . . . . . , . . . ,” . , - . “’ . ’ 9.2% ,” . , . . . , -, , . “ . . . , - ,” . “ 7 . ,” . . . , , .. , , . . , , , , . , , . . . , , .