‘ಈದ್’ಗೆ ಕತ್ರಿನಾ-ಸಲ್ಮಾನ್ ನಟನೆಯ ‘ಟೈಗರ್ 3’ ರೀಲಿಸ್ ಬೆಂಗಳೂರು, ಮಾರ್ಚ್ 05, 2022 (..):ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್ ನಟನೆಯ ಟೈಗರ್ 3 ರೀಲಿಸ್ ಗೆ ಕಾಲ ಕೂಡಿಬಂದಿದೆ. ಹೌದು. ಸಲ್ಮಾನ್ ಖಾನ್ ಅವರ ಟೈಗರ್ 3 ಗಾಗಿ (Tiger3) ಕಾದು ಕುಳಿತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ದೊರೆತಿದೆ. 2023ರ ‘ಈದ್’ ಹಬ್ಬಕ್ಕೆ ಟೈಗರ್ 3 ಥಿಯೇಟರ್‌ಗಳಲ್ಲಿ ಬರಲು ಸಿದ್ಧವಾಗಿದೆ. ಸಲ್ಮಾನ್ ಈ ಹೊಸ ಅಪ್ ಡೇಟ್ಸ್ ಜೊತೆ ಚಿತ್ರದ ಮೊದಲ ಟೀಸರ್ ಹಂಚಿಕೊಂಡಿದ್ದಾರೆ. 21 ಏಪ್ರಿಲ್ 2023 ರಂದು ಟೈಗರ್-3 ಬಿಡುಗಡೆಯಾಗಲಿದೆ. ಸಲ್ಮಾನ್ ಖಾನ್ ಟೈಗರ್ 3 ರ ಫಸ್ಟ್ ಲುಕ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ.