ಉಕ್ರೇನ್ ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವು. ಕೀವ್,ಮಾರ್ಚ್,2,2022(..):ಉಕ್ರೇನ್ ನಲ್ಲಿ ರಷ್ಯಾ ದಾಳಿ ವೇಳೆ ಭಾರತೀಯ ಕರ್ನಾಟಕ ಮೂಲದ ನವೀನ್ ಸಾವನ್ನಪ್ಪಿದ್ದರು. ಇದೀಗ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಉಕ್ರೇನ್ ನಲ್ಲಿ ಮೃತಪಟ್ಟಿದ್ದಾರೆ. ಆದರೆ ಇವರು ಸಾವನ್ನಪ್ಪಿರುವುದು ರಷ್ಯಾ ದಾಳಿಯಿಂದಲ್ಲ. ಹೌದು ಉಕ್ರೇನ್ ನಲ್ಲಿ ಪಂಜಾಬ್​​ ರಾಜ್ಯದ ಬರ್ನಾಲ್ ಗ್ರಾಮದ ಚಂದನ್ ಜಿಂದಾಲ್ (22) ಮೃತಪಟ್ಟಿದ್ದಾರೆ. ಚಂದನ್​​ಗೆ ಇಸ್ಕೆಮಿಕ್ ಸ್ಟ್ರೋಕ್ ಆಗಿತ್ತು( ಮಿದುಳಿಗೆ ರಕ್ತ ಪೂರೈಕೆ ಸರಿಯಾಗಿ ಆಗದಾಗ ಉಂಟಾಗುವ ಪಾರ್ಶ್ವವಾಯು​). ಚಂದನ್​ ಜಿಂದಾಲ್​ ಗೆ ಪಾರ್ಶವಾಯು ಉಂಟಾಗಿ ಅವರನ್ನು ಆಸ್ಪತ್ರೆಯ ತುರ್ತುಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಚಂದನ್ ಇಂದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅವರ ಕುಟುಂಬಕ್ಕೂ ಈಗಾಗಲೇ ವಿಷಯ ತಿಳಿಸಲಾಗಿದ್ದು, ಚಂದನ್ ಮೃತದೇಹವನ್ನು ವಾಪಸ್​ ತರಲು ಸಹಾಯ ಮಾಡುವಂತೆ ಅವರ ತಂದೆ, ಕೇಂದ್ರ ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಚಂದನ್ ಜಿಂದಾಲ್ ಉಕ್ರೇನ್​​ ನಲ್ಲಿರುವ ವಿನ್ನಿಟ್ಸಿಯಾ ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಕೋರ್ಸ್​ ಮಾಡುತ್ತಿದ್ದರು ಎನ್ನಲಾಗಿದೆ. : –- - – .