ಉಕ್ರೇನ್ ನಲ್ಲಿ ಭಾರತೀಯರು ಒತ್ತೆಯಾಳು ವಿಚಾರ: ಸ್ಪಷ್ಟನೆ ನೀಡಿದ ಭಾರತೀಯ ರಾಯಭಾರ ಕಚೇರಿ. ಕೀವ್,ಮಾರ್ಚ್,3,2022(..):ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ ಇನ್ನಷ್ಟು ತೀವ್ರಗೊಂಡಿರುವ ನಡುವೆಯೇ ರಷ್ಯಾ ಹಾಗೂ ಉಕ್ರೇನ್ ದೇಶಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ಮಾಡಿದ್ದು, ಭಾರತೀಯರನ್ನು ರಷ್ಯಾ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ಉಕ್ರೇನ್, ಉಕ್ರೇನ್ ಇಂತಹ ಕೃತ್ಯದಲ್ಲಿ ಭಾಗಿಯಾಗಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯಗಳು ಆರೋಪಿಸಿವೆ. ಉಕ್ರೇನ್ ನಲ್ಲಿ ಭಾರತೀಯರು ಒತ್ತಯಾಳಾಗಿದ್ದಾರೆಂಬ ಆರೋಪ ಹಿನ್ನೆಲೆಯಲ್ಲಿ ಈ ಕುರಿತು ಭಾರತೀಯ ರಾಯಭಾರ ಕಚೇರಿ ಸ್ಪಷ್ಟನೆ ನೀಡಿದೆ. ಉಕ್ರೇನ್ ನಲ್ಲಿ ಭಾರತೀಯರು ಸುರಕ್ಷಿತರಾಗಿದ್ದಾರೆ. ಭಾರತೀಯರು ಯಾರೂ ಒತ್ತೆಯಾಳಗಿಲ್ಲ. ಈವರೆಗೆ 17 ಸಾವಿರ ಭಾರತೀಯರನ್ನ ವಾಪಸ್ ದೇಶಕ್ಕೆ ಕರೆತರಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ. : - – -.