ಉಕ್ರೇನ್ ನಲ್ಲಿ ಸಿಲುಕಿರುವ ಮೈಸೂರಿನ 27 ಮತ್ತು ಹಾಸನದ 6 ವಿದ್ಯಾರ್ಥಿಗಳು. ಮೈಸೂರು,ಮಾರ್ಚ್,2,2022(..):ಉಕ್ರೇನ್ ನಲ್ಲಿ ಮೈಸೂರಿನ 27 ವಿದ್ಯಾರ್ಥಿಗಳಿದ್ದಾರೆ. ಓರ್ವ ದೇಶಕ್ಕೆ ವಾಪಸ್ ಆಗಿದ್ದು ಉಳಿದವರನ್ನ ರಕ್ಷಿಸಬೇಕಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಮಾಹಿತಿ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಡಿಸಿ ಬಗಾದಿ ಗೌತಮ್, ತಹಶೀಲ್ದಾರ್ ಗಳನ್ನ ವಿದ್ಯಾರ್ಥಿಗಳ ಮನೆಗೆ ಕಳಿಸಿದ್ದೇವೆ. ಮಾಹಿತಿ ಕಲೆ ಹಾಕುತ್ತಿದ್ದೇವೆ. ನಮಗೆ ಸಿಗುವ ಮಾಹಿತಿ ಸರ್ಕಾರಕ್ಕೆ ಕಳಿಸುತ್ತೇವೆ. ಬಹುತೇಕ ವಿದ್ಯಾರ್ಥಿಗಳು ಕೀವ್ ಕಾರ್ಖಿವ್ ನಲ್ಲಿದ್ದಾರೆ. ಕೆಲವರು ಸಂಪರ್ಕದಲ್ಲಿದ್ದಾರೆ. ಕೆಲವರು ಸಂಪರ್ಕದಲ್ಲಿಲ್ಲ. ಒಬ್ಬರು ಸಂಪರ್ಕಕ್ಕೆ ಸಿಕ್ಕರೇ 7 ರಿಂದ 8 ಮಂದಿಯ ಮಾಹಿತಿ ಸಿಗುತ್ತೆ ಎಂದರು. ಇನ್ನು ಹಾಸನದ 6 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಹಾಸನ ಡಿಸಿ ಆರ್.ಗಿರೀಶ್, ಈಗಾಗಲೇ ಹಾಸನದ 7 ಜನ ಭಾರತಕ್ಕೆ ವಾಪಸ್ ಆಗಿದ್ದಾರೆ. 6 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದು, ಈ ಪೈಕಿ 3 ಮಂದಿ ಕಾರ್ಖಿವ್ ನಲ್ಲಿದ್ದಾರೆ. ಇಬ್ಬರು ಸುಮಿ ಪ್ರದೇಶದಲ್ಲಿ ಸಿಲುಕಿದ್ದಾರೆ. ಒಬ್ಬರ ಬಗ್ಗೆ ಮಾಹಿತಿ ಇಲ್ಲ. ಸಂಬಂಧಪಟ್ಟವರ ಜತೆ ಚರ್ಚಿಸಿ ಏರ್ ಲಿಫ್ಟ್ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. : -27 – … 27 6 , 2, 2022 (..): “ 27 . , , ,” . , . “ . , . , , . , 7-8 ,” . . “ . . , . . ,” .: / / / / - /