ಉಕ್ರೇನ್ ನಲ್ಲಿ 20 ಸಾವಿರ ಮಂದಿ ಭಾರತೀಯರು: ವಾಪಸ್ ಕರೆ ತರಲು ಕ್ರಮ- ಸಚಿವ ಅಶ್ವಥ್ ನಾರಾಯಣ್. ಬೆಂಗಳೂರು,ಮಾರ್ಚ್,2,2022(..):ಉಕ್ರೇನ್ ನಲ್ಲಿ 20 ಸಾವಿರ ಭಾರತೀಯರು ಸಿಲುಕಿದ್ದಾರೆ. ಸವಾಲಿನ ಮಧ್ಯೆ ನಮ್ಮವರನ್ನ ವಾಪಸ್ ಕರೆ ತರಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು. ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಉಕ್ರೇನ್ ನಿಂದ ಈವರಗೆ 2 ಸಾವಿರ ಜನರನ್ನ ಕರೆತರಲಾಗಿದೆ. ಇನ್ನು 20 ಸಾವಿರ ಜನ ಸಿಲುಕಿದ್ದು ವಾಪಸ್ ಕರೆತರಲು ಯತ್ನಿಸುತ್ತೇವೆ ಎಂದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರಸ್ ಆಪಾದನೆ ರಾಜಕೀಯ ಪ್ರೇರಿತ. ಉಕ್ರೇನ್ ನಲ್ಲಿ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸ್ಥಳೀಯ ದೇಶಗಳ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಅಶ್ವಥ್ ನಾರಾಯಣ್ ತಿಳಿಸಿದರು. : 20 - – - .