ವಿದ್ಯಾರ್ಥಿ ನವೀನ್ ಸಾವು ಬೆನ್ನಲ್ಲೆ ಎಚ್ಚೆತ್ತ ಸರ್ಕಾರ: ಭಾರತೀಯರ ಸ್ಥಳಾಂತರಕ್ಕೆ ಸುರಕ್ಷಿತ ಮಾರ್ಗಕ್ಕೆ ಮನವಿ. ನವದೆಹಲಿ,ಮಾರ್ಚ್,1,2022(..):ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆದಿದ್ದು ರಷ್ಯಾ ಕ್ಷಿಪಣಿ ದಾಳಿ ವೇಳೆ ಕರ್ನಾಟಕದ ನವೀನ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದು ಈ ಬೆನ್ನಲ್ಲೆ ಇದೀಗ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ನವೀನ್ ಸಾವಿನ ಬಳಿಕ ಎಚ್ಚೆತ್ತ ಕೇಂದ್ರ ಸರ್ಕಾರ, ಭಾರತೀಯರಿಗೆ ಭದ್ರತೆ ನೀಡಿ. ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರಿಸುವಂತೆ ರಷ್ಯಾ ಮತ್ತು ಉಕ್ರೇನ್ ರಾಯಭಾರಿಗಳಿಗೆ ಮನವಿ ಮಾಡಿದೆ. ಈ ಸಂಬಂಧ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಮನವಿ ಮಾಡಿದ್ದು, ಖಾರ್ಕಿವ್ ನಲ್ಲಿರುವ ಭಾರತೀಯ ಪ್ರಜೆಗಳಿಗೆ ಭದ್ರತೆ ನೀಡಿ. ಇತರೆ ನಗರಗಳಲ್ಲಿ ತುರ್ತು ಸುರಕ್ಷಿತ ಮಾರ್ಗಕ್ಕೆ ಭಾರತೀಯರನ್ನ ಸ್ಥಳಾಂತರಿಸಿ. ಸುರಕ್ಷಿತವಾಗಿ ಭಾರತೀಯರನ್ನ ಸ್ಥಳಾಂತರಿಸಿ ಎಂದು ಸೂಚಿಸಿದ್ದಾರೆ. : ---- -