ಉಕ್ರೇನ್ -ರಷ್ಯಾ ಯುದ್ಧ: ಕ್ಷಿಪಣಿ ದಾಳಿ ವೇಳೆ ಕರ್ನಾಟಕ ಮೂಲದ ವಿದ್ಯಾರ್ಥಿ ಬಲಿ. ಬೆಂಗಳೂರು,ಮಾರ್ಚ್,1,2022(..):ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆಸಿದ್ದು ಈ ನಡುವೆ ಕ್ಷಿಪಣಿ ದಾಳಿ ವೇಳೆ ಕರ್ನಾಟಕ ಮೂಲದ ವಿದ್ಯಾರ್ಥಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಕುರಿತು ಭಾರತೀಯ ವಿದೇಶಾಂಗ ಇಲಾಖೆ ಅಧಿಕೃತವಾಗಿ ಮಾಹಿತಿ ನೀಡಿದೆ. ಹಾವೇರಿ ಚಳಗೇರಿ ನಿವಾಸಿ ನವೀನ್ ಶೇಖರಪ್ಪ ಮೃತಪಟ್ಟ ವಿದ್ಯಾರ್ಥಿ. ಖಾರ್ಕಿವ್ ನ್ಯಾಷನಲ್ ಕಾಲೇಜಿನಲ್ಲಿ ಮೆಡಿಕಲ್ ಓದುತಿದ್ದ ವಿದ್ಯಾರ್ಥಿ ನವೀನ್ ಬೆಳಿಗ್ಗೆ ತಿಂಡಿ ತರಲು ಹೊರಹೋಗಿದ್ದಾರೆ. ಈ ವೇಳೆ ರಷ್ಯಾ ಸೇನೆ ರಾಕೆಟ್ ದಾಳಿ ನಡೆಸಿದ್ದು, ವಿದ್ಯಾರ್ಥಿ ನವೀನ್ ಮೃತಪಟ್ಟಿದ್ದಾರೆ. ಈ ವೇಳೆ ಕ್ಷಿಪಣಿ ದಾಳಿ ನಡೆದಿದ್ದು ಈ ಸಮಯದಲ್ಲಿ ಖಾರ್ಕಿವ್ ನಲ್ಲಿ ನವೀನ್ ಮೃತಪಟ್ಟಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಅಧಿಕೃತವಾಗಿ ತಿಳಿಸಿದೆ. : --: - -