ಅಮೂಲ್ಯ ಬೇಬಿ ಬಂಬ್ ಫೋಟೋಶೂಟ್: ಫ್ಯಾನ್ಸ್ ಮೆಚ್ಚಿದ ಫೋಟೋಗಳು ಬೆಂಗಳೂರು, ಫೆಬ್ರವರಿ 28, 2022 (..):ನಟಿ ಅಮೂಲ್ಯ ತನ್ನ ಬೇಬಿ ಬಂಬ್ ಫೋಟೋಶೂಟ್ ಮಾಡಿಸಿದ್ದಾರೆ. ಅಮೂಲ್ಯ ಅದ್ಧೂರಿಯಾಗಿ ಸೀಮಂತ ಕೂಡ ಮಾಡಿಕೊಂಡಿದ್ದರು. ಪತಿ ಜಗದೀಶ್ ಕುಟುಂಬಸ್ಥರು ನಂತರ ಸ್ಯಾಂಡಲ್‌ವುಡ್ ಮಂದಿ ಸೇರಿ ಅಮೂಲ್ಯ ಸೀಮಂತ ನೆರವೇರಿಸಿದ್ದರು. ಇದೀಗ ಬೇಬಿ ಬಂಬ್ ಫೋಟೋಶೂಟ್ ಮಾಡಿಕೊಂಡಿದ್ದು, ಆ ಬೇಬಿಬಂಪ್ ಫೋಟೊಗಳು ಅಭಿಮಾನಿಗಳನ್ನು ಸೆಳೆದಿವೆ. ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ನೀಲಿ ಬಣ್ಣದ ಡ್ರೆಸ್ ಧರಿಸಿ, ನೀರಿನ ನಡುವೆ ಹೂವಿನ ಉಯ್ಯಾಲೆಯ ಮೇಲೆ ಕುಳಿತು ಅಮೂಲ್ಯ ಫೋಟೋಗೆ ಪೋಸ್ ಕೊಟ್ಟಿದ್ದಾರೆ.