ಕುರ್ಚಿಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಮತ್ತೆ ಫ್ಲಾಪ್ ಆಗುತ್ತೆ- ಸಚಿವ ಶ್ರೀರಾಮುಲು. ಬಳ್ಳಾರಿ,ಫೆಬ್ರವರಿ,27,2022(..):ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿಲ್ಲ ಇದು ಕುರ್ಚಿಗಾಗಿ ನಡೆಯುತ್ತಿರುವ ಪಾದಯಾತ್ರೆ. ಮತ್ತೆ ಈ ಪಾದಯಾತ್ರೆ ಫ್ಲಾಪ್ ಆಗುತ್ತೆ ಎಂದು ಸಚಿವ ಶ್ರೀರಾಮುಲು ಲೇವಡಿ ಮಾಡಿದರು. ಬಳ್ಳಾರಿಯಲ್ಲಿ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ಮೇಕೆದಾಟು ಪಾದಯಾತ್ರೆ ಕುರ್ಚಿಗಾಗಿ ನಡೆಯುತ್ತಿರುವ ನಾಟಕ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಗಲುಕನಸು ಕಾಣುತ್ತಿದೆ. ಮೊದಲ ಹಂತದ ಪಾದಯಾತ್ರೆ ಫ್ಲಾಪ್ ಆಯ್ತು. ಈಗ ಮಾಡುತ್ತೀರೋ ಪಾದಯಾತ್ರೆಯೂ ಫ್ಲಾಫ್ ಆಗುತ್ತೆ. ಏನೇ ಆದ್ರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ನುಡಿದರು. ಬಿಎಸ್ ವೈ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಬಿಎಸ್ ವೈ . ಬಿಜೆಪಿ 2 ಸ್ಥಾನದಿಂದ 120 ಸ್ಥಾನ ಪಡೆದಿದೆ ಇದರ ಕೀರ್ತಿ ಬಿಎಸ್ ವೈಗೆ ಸಲ್ಲುತ್ತದೆ ಎಂದು ಸಚಿವ ಶ್ರೀರಾಮುಲು ಗುಣಗಾನ ಮಾಡಿದರು. : ---.