ಮಾಜಿ ಸಿಎಂ ಬಿಎಸ್ ವೈಗೆ ಹುಟ್ಟುಹಬ್ಬದ ಸಂಭ್ರಮ: ನಾಡನ್ನ ನಡೆಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ ಬಿವೈ ರಾಘವೇಂದ್ರ. ಬೆಂಗಳೂರು,ಫೆಬ್ರವರಿ,27,2022(..):ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮವಾಗಿದ್ದು ಈ ಹಿನ್ನೆಲೆ ರಾಜಕೀಯ ಗಣ್ಯರು ಹುಟ್ಟುಹಬ್ಬದ ಶುಭಕೋರುತ್ತಿದ್ದಾರೆ. ಈ ಮಧ್ಯೆ ಬಿಎಸ್ ವೈ ಅವರ ಪುತ್ರ ಹಾಗೂ ಸಂಸದ ಬಿವೈ ರಾಘವೇಂದ್ರ ಅವರು ಸಹ ಶುಭಕೋರಿದ್ದಾರೆ. ಬಿಎಸ್ ಯಡಿಯೂರಪ್ಪ ಅವರಿಗೆ ನಾಡನ್ನ ನಡೆಸೂ ಶಕ್ತಿಯನ್ನ ದೇವರು ನೀಡಲಿ. ಬಿಎಸ್ ವೈ 4 ಬಾರಿ ಸಿಎಂ ಆಗಿದ್ದವರು ರೈತರ ಉಳಿಕೆಗಾಗಿ ಹೋರಾಟ ಮಾಡಿದವರು. ಹೀಗಾಗ ಜನ ಬಂದು ಬಿಎಸ್ ವೈ ಅವರಿಗೆ ಹರಸುತ್ತಿದ್ದಾರೆ ಎಂದು ನುಡಿದರು. ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಂಸದ ಬಿವೈ ರಾಘವೇಂದ್ರ ಶಿವಮೊಗ್ಗ ಶಾಂತ ಸ್ಥಿತಿಗೆ ಮರಳುತ್ತಿದೆ. ಧರ್ಮದ ಪರ ಮಾತನಾಡುತ್ತಿರುವುದಕ್ಕೆ ಕಗ್ಗೋಲೆಗಳು ಆಗುತ್ತಿವೆ. ಮುಂದೇ ಈ ರೀತಿ ಆಗದಂತೆ ಎಚ್ಚೆತ್ತುಕೊಳ್ಳಬೇಕು ಎಂದರು. : - -