ಗಂಗೋತ್ರಿ ಶಾಲೆಯ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಪುಸ್ತಕ ವಿತರಣೆ. ಮೈಸೂರು,ಫೆಬ್ರವರಿ,26,2022(..):ಮೈಸೂರು ವಿಶ್ವವಿದ್ಯಾನಿಲಯದ ಹಿಂದುಳಿದ ವರ್ಗಗಳ ಸಂಶೋಧಕರ ಒಕ್ಕೂಟ ಹಾಗೂ ರೋಟ್ರ್ಯಾಕ್ಟ್ ಮೈಸೂರು ಇವರ ನೆರವಿನೊಂದಿಗೆ ಮಾನಸಗಂಗೋತ್ರಿ ಆವರಣದಲ್ಲಿರುವ ಗಂಗೋತ್ರಿ ಶಾಲೆಯ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಶನಿವಾರ ಪರೀಕ್ಷಾ ತಯಾರಿ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ. ಚೈತ್ರಾ ನಾರಾಯಣ್ ಅವರು, ರೋಟ್ಯ್ರಾಕ್ಟ್ ಮೈಸೂರು ಅಧ್ಯಕ್ಷರಾದ ಯಶಸ್ ಎಸ್ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾದ ಚಿಂದೇಗೌಡ ಸಿ.ಎ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. : - ---