ಮೈಸೂರು ವಿವಿ: ನಾಳೆ ಸ್ಪರ್ಧಾತ್ಮಕ ಪರೀಕ್ಷೆಗಳ ಒಂದು ದಿನದ ಉಚಿತ ಕಾರ್ಯಾಗಾರ. ಮೈಸೂರು,ಫೆಬ್ರವರಿ,23,2022(..):ದಲಿತ ವಿದ್ಯಾರ್ಥಿ ಒಕ್ಕೂಟ, ಸಿ.ಎಸ್.ಐ.ಆರ್., ಯುಜಿಸಿ ನೆಟ್ ತರಬೇತಿ ಕೇಂದ್ರ ಹಾಗೂ ಐ.ಕ್ಯು.ಎ.ಸಿ. ಇವರ ಸಂಯುಕ್ತ ಆಶ್ರಯದಲ್ಲಿ “ಸ್ವಾವಲಂಬನೆಯತ್ತ ಯುವ ಸಮುದಾಯ” ಸ್ಪರ್ಧಾತ್ಮಕ ಪರೀಕ್ಷೆಗಳ ಒಂದು ದಿನದ ಉಚಿತ ಕಾರ್ಯಾಗಾರವನ್ನು ಫೆಬ್ರವರಿ 24ರಂದು ಬೆ.10.30ಕ್ಕೆ ಮಾನಸ ಗಂಗೋತ್ರಿ ಸೆನೆಟ್ ಭವನದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದ ಉದ್ಘಾಟನೆಯನ್ನು ಉಪ ಪೊಲೀಸ್ ಆಯುಕ್ತ ಪ್ರದೀಪ್ ಗುಂಟಿ ನೆರವೇರಿಸಲಿದ್ದಾರೆ. ಮೈಸೂರು ವಿವಿ ಕುಲಪತಿ ಪ್ರೊ. ಜಿ. ಹೇಮಂತ ಕುಮಾರ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಯಾಗಿ ವಿವಿ ಆಡಳಿತಾಧಿಕಾರಿ ಪ್ರೊ. ಪಿ. ಮಾದೇಶ್ ಭಾಗವಹಿಸಲಿದ್ದಾರೆ. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ನಿರ್ದೇಶಕ‌ ಡಾ.ಎಸ್.ಟಿ. ರಾಮಚಂದ್ರ , ಐ.ಕ್ಯು.ಎ.ಸಿ ನಿರ್ದೇಶಕ ಪ್ರೊ. ಎನ್.ಎಸ್. ಹರಿನಾರಾಯಣ ಪಾಲ್ಗೊಳ್ಳಲಿದ್ದಾರೆ. ಗೋಷ್ಠಿಯಲ್ಲಿ ಬೆಂಗಳೂರಿನ ಸಬ್ ಇನ್ಸ್ ಪೆಕ್ಟರ್ ಲಾಲ್‌ಸಾಬ್ ರಫೀಕ್ ಹಾಗೂ ಹುಸೇನಪ್ಪ ನಾಯಕ್ ಅವರು ಸಾಮಾನ್ಯ ವಿಜ್ಞಾನ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಮಾನಸಿಕ ಸಾಮರ್ಥ್ಯ ಎಂಬ ವಿಷಯದ ಬಗ್ಗೆ ಬೆಂಗಳೂರಿನ ಯು.ಪಿ.ಎಸ್.ಸಿ. ಮೆಂಟರ್ ಸುದರ್ಶನ್ ಎನ್.ಆರ್. ವಿಷಯ ಮಂಡಿಸಲಿದ್ದಾರೆ. ಸಮಾರೋಪ ಭಾಷಣವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಡಿ.ಚ. ನಟೇಶ್ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಮೈಸೂರು ವಿವಿ ಕುಲಸಚಿವ ಪ್ರೊ. ಆರ್. ಶಿವಪ್ಪ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಸಂಶೋಧಕರ ಸಂಘದ ಅಧ್ಯಕ್ಷ ಎಸ್. ಮರಿದೇವಯ್ಯ ಪಾಲ್ಗೊಳ್ಳಲಿದ್ದಾರೆ. : --. … : - , 23, 2022 (..): , , , - ‘ -,” 24, 10.30 , . . . . , -, . . . , , , . . .. , , , . .. , , . , , , . .., , , .. .. , , , . . . , , . , , .: / - /