ಸೆಲ್ಫಿ ಕೇಳಲು ಬಂದ ಅಭಿಮಾನಿ ಮೇಲೆ ಹಲ್ಲೆ ಆರೋಪ: ನಟ ಧನ್ವೀರ್ ವಿರುದ್ಧ ಎಫ್’ಐಆರ್ ಬೆಂಗಳೂರು, ಫೆಬ್ರವರಿ 19, 2022 (..):ಸ್ಯಾಂಡಲ್ ವುಡ್ ನಟ ಧನ್ವೀರ್ ವಿರುದ್ಧ ಎಫ್’ಐಆರ್ ದಾಖಲಾಗಿದೆ. ಹೌದು. ಬೈ ಟು ಲವ್ ಸಿನಿಮಾ ನಾಯಕ ಧನ್ವೀರ್ ವಿರುದ್ಧ ಸೆಲ್ಫೀ ಕೇಳಲು ಬಂದ ಅಭಿಮಾನಿ ಮೇಲೆ ಹಲ್ಲೆ ನಡೆಸಿದ ಆರೋಪ ಬಂದಿದೆ. ಫೆಬ್ರವರಿ 17 ರಂದು ಘಟನೆ ನಡೆದಿದೆ ಎನ್ನಲಾಗಿದೆ. ಅಭಿಮಾನಿ ಚಂದ್ರಶೇಖರ್ ಎಂಬವರ ಮೇಲೆ ಧನ್ವೀರ್ ಮತ್ತು ಸ್ನೇಹಿತರು ಸೆಲ್ಫೀ ಕೇಳಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಿನಿಮಾ ಪ್ರಚಾರ ಕೆಲಸದಲ್ಲಿದ್ದಾಗ ಚಂದ್ರಶೇಖರ್ ಮತ್ತು ಸ್ನೇಹಿತರು ಸೆಲ್ಫೀ ಕೇಳಲು ಹೋದಾಗ ಕನ್ನಡ ಬರಲ್ವಾ ಎಂದು ಬೈದು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.